ಕ್ರೀಡೆಯ ಮೂಲಕ ದೈಹಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಿ:ಕೊಪ್ಪ

ತಾಳಿಕೋಟೆ:ಸೆ.17: ಕ್ರೀಡೆ ಎಂಬುದು ಅದೊಂದು ಕೇವಲ ಆಟವಲ್ಲಾ ಸದೃಢವಾದ ಮನಸ್ಥಿತಿಯೊಂದಿಗೆ ದೈಹಿಕ ಸಾಮಾಥ್ರ್ಯವನ್ನು ಹೆಚ್ಚಿಸುವಂತಹದ್ದಾಗಿದೆ ಚಟಮುಕ್ತವಾದಂತಹ ಸದೃಢ ದೇಶ ಕಟ್ಟಲು ಕ್ರೀಡಾಕೂಟಗಳಲ್ಲಿ ಎಲ್ಲ ವಿಧ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ರಾಜ್ಯ ಪ್ರಶಸ್ತಿ ಪುರಸ್ಕøತರಾದ ಅರವಿಂದ ಕೊಪ್ಪ ಅವರು ಹೇಳಿದರು.
ಶನಿವಾರರಂದು ಪಟ್ಟಣದ ಶ್ರೀ ಸಂಗಮೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕರ್ನಾಟಕ ಕ್ರೀಡಾ ಪ್ರಾಧಿಕಾರ ಬೆಂಗಳೂರ, ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ 2023-24ನೇ ಸಾಲಿನ ತಾಳಿಕೋಟೆ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡುತ್ತಿದ್ದ ಅವರು ಇಂದಿನ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗುತ್ತಿರುವದು ನೋವಿನ ಸಂಗತಿಯಾಗಿದೆ ದುಶ್ಚಟಗಳು ಬಾಯಿಗೆ ರುಚಿಕೊಟ್ಟು ಮನುಷ್ಯನ ದೈಹಿಕ ಸಾಮಾಥ್ರ್ಯವನ್ನು ಕುಗ್ಗಿಸುತ್ತಾ ಬಲಿ ಪಡೆಯುತ್ತಿದೆ ಇಂತಹ ದುಶ್ಚಟಗಳಿಂದ ಎಲ್ಲರೂ ದೂರ ಉಳಿಯಬೇಕಿದೆ ಭಾರತ ದೇಶ ಕ್ರೀಡೆಗೆ ವಿಶ್ವದಲ್ಲಿಯೇ ಮಾನ್ಯತೆ ಪಡೆದಂತಹ ದೇಶವಾಗಿದೆ ಯೋಗವೆಂಬುದನ್ನು ವಿಶ್ವಕ್ಕೆ ಪರಿಚಯಿಸಿ ವಿಶ್ವವ್ಯಾಪಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಅಂತಹ ಪವಿತ್ರವಾದ ದೇಶದಲ್ಲಿ ಹುಟ್ಟಿರುವ ನಾವುಗಳು ಪ್ರತಿ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು ಕ್ರೀಡೆಯಿಂದ ಕೇವಲ ದೈಹಿಕ ಸಾಮಾಥ್ರ್ಯವಷ್ಟೇ ಅಲ್ಲಾ ಮಾನಸಿಕ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವಂತಹ ಶಕ್ತಿ ಅದರಲ್ಲಿ ಅಡಗಿದೆ ಇಂದಿನ ಸರ್ಕಾರವು ಶೈಕ್ಷಣಿಕವಾಗಿ ಕೊಟ್ಟಂತಹ ಆದ್ಯತೆ ಕ್ರೀಡಾ ಚಟುವಟಿಗೂ ಆಧ್ಯತೆ ಕೊಡುವಂತಹ ಕಾರ್ಯ ಮಾಡಬೇಕೆಂದು ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕಡ್ಡಾಯವಾಗಿ ದೈಹಿಕ ಶಿಕ್ಷಣ ಸಿಗುವಂತಾಗಬೇಕು ಇದನ್ನು ಸರ್ಕಾರವು ಜಾರಿಗೆ ತರಬೇಕಿದೆ ತಿಳಿಸಿದ ಅವರು ಅರವಿಂದ ಕೊಪ್ಪ ಅವರು ನಾನು ನನ್ನೊಂದಿಗೆ ನಡೆಸುವ ಪ್ರಕ್ರೀಯೇಗೆ ಯಾರಿಂದಲೂ ಬೆಲೆ ಕಟ್ಟಲು ಆಗುವದಿಲ್ಲಾ ಚಟಮುಕ್ತವಾದ ಭಾರತ ವಿಶ್ವಕ್ಕೆ ಮಾದರಿಯ ಭಾರತವಾಗಲಿದೆ ಈ ಕಾರಣದಿಂದ ವಿಧ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೇ ಎಲ್ಲರೂ ಕ್ರೀಡಾಮನೋಭಾವನೆಯನ್ನು ಹೆಚ್ಚಿಸಿಕೊಂಡು ಸಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಂಗಮಾರ್ಯ ವಿಧ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಎಂಬುದು ಸಮಾನವಾಗಿ ಸ್ವಿಕರಿಸಬೇಕು ಗೆದ್ದೆ ಎಂಬ ಅಹಂಭಾವ ಬೇಡಾ ಸೋತೆ ಎಂದು ಕುಗ್ಗುವದು ಬೇಡಾ ಮುಂದೆ ಇದೇ ಸೋಲೇ ಗೆಲುವಿನ ಸೋಪಾನವಾಗಲಿದೆ ಎಂದು ಅವರು ಮನಸ್ಸಿನಲ್ಲಿಯ ಚಂಚಲತೆ, ಮಾನಸಿಕತೆ, ಸದೃಢವಾದ ದೈಹಿಕ ಸಾಮಾಥ್ರ್ಯ ಹೊಂದಲು ಕ್ರೀಡೆ ಎಂಬುದು ಎಲ್ಲ ವಿಧ್ಯಾರ್ಥಿಗಳಿಗೆ ಅತ್ಯವಶ್ಯವಾಗಿದ್ದು ಎಲ್ಲ ಕ್ರೀಡಾ ಮನೋಭಾವನೆಯೊಂದಿಗೆ ಪಾಲ್ಗೊಂಡು ಜಿಲ್ಲೆ, ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೆ ಪ್ರಜ್ವಲಿಸುವ ಕ್ರೀಡಾಪಟುಗಳಾಗಿ ಹೊರಹೊಮ್ಮುವ ಕಾರ್ಯವಾಗಲಿ ಎಂದರು.
ಕ್ರೀಡಾ ದ್ವಜಾರೋಹಣವನ್ನು ಎಸ್.ಎಸ್.ವಿಧ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ನೆರವೇರಿಸಿದರು. ಕ್ರೀಡಾ ಪಟುಗಳಿಗೆ ದೈಹಿಕ ಶಿಕ್ಷಕ ಎಂ.ಎಸ್.ರಾಯಗೊಂಡ ಅವರು ಪ್ರತಿಜ್ಞಾವಿಧಿ ಭೋದಿಸಿದರು.
ಈ ಸಮಯದಲ್ಲಿ ಕ್ರೀಡಾ ಮುಖ್ಯಸ್ಥರುಗಳಾದ ಸುರೇಶ ಆಲೂರ, ಶಿವಮೂರ್ತಿ ಮಠ, ಎಸ್.ಜಿ.ಪಾಟೀಲ, ಬಿ.ಎ.ವಂದಾಲ, ಆರ್.ಎ.ವೇರೆಕುಲ, ದೈ.ಶಿ. ಎಂ.ಎಸ್.ಪಾಟೀಲ, ಪತ್ರಕರ್ತರಾದ ಅಂಬಾಜಿ ಘೋರ್ಪಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಜಿ.ರಾಠೋಡ, ಸಂಗಮೇಶ್ವರ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ, ಎಸ್.ಸಿ.ಗುಡಗುಂಟಿ, ಎಸ್.ವ್ಹಿ.ಜಾಮಗೊಂಡಿ, ಬಿ.ಆಯ್.ಹಿರೇಹೊಳಿ, ಶಿವು ನಾಯಕ, ಅಂಬ್ರೆಷ ನಾಗರಾಳ, ಶರಣು ಬಿರಾದಾರ, ಹಾಗೂ ವಿವಿಧ ಶಾಲಾ ದೈಹಿಕ ಶಿಕ್ಷಕರುಗಳು ಮತ್ತು ಎಸ್.ಎಸ್.ವಿಧ್ಯಾ ಸಂಸ್ಥೆಯ ಬಿಪಿಎಡ್ ಪ್ರ ಶಿಕ್ಷಣಾರ್ಥಿಗಳು, ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಶ್ರೀಮತಿ ಮಡಿವಾಳಮ್ಮ ನಾಡಗೌಡ ಸ್ವಾಗತಿಸಿದರು. ಶಿಕ್ಷಕ ಸಿದ್ದನಗೌಡ ಕಾಶಿನಕುಂಟಿ ನಿರೂಪಿಸಿ ವಂದಿಸಿದರು.

ವಿಧ್ಯಾರ್ಥಿಗಳು ಬಾಯಿ ಚಟದ ದುಶ್ಚಟಗಳಿಗೆ ಬಲಿಯಾಗದೇ ಮಾನಸಿಕ ಸ್ಥಿರ ನೆಮ್ಮದಿ ಮತ್ತು ದೈಹಿಕ ಸಾಮರ್ಥೈ ಹೆಚ್ಚಿಸುವ ಕ್ರೀಡೆ ಎಂಬುದರಲ್ಲಿ ಎಲ್ಲರ ತೊಡಗಿಕೊಳ್ಳಬೇಕು ಇದರಿಂದ ದೇಶದಲ್ಲಿಯೇ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯ.
                      ಎಚ್.ಎಸ್.ಪಾಟೀಲ
                    ಎಸ್.ಎಸ್.ವಿಧ್ಯಾ ಸಂಸ್ಥೆಯ ಅಧ್ಯಕ್ಷ