ಕ್ರೀಡೆಯಿಂದ ಮಾನಸಿಕ ಒತ್ತಡ ಕಡಿಮೆ

ಕೆ.ಆರ್.ಪುರ,ಮಾ.೨೯- ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಕ್ರೀಡೆಗಳು ಹೆಚ್ಚು ಸಹಕಾರಿ ಯಾಗಿದೆ ಎಂದು ಮಾಜಿ ಪಾಲಿಕೆ ಸದಸ್ಯ ಎಸ್.ಉದಯ್ ಕುಮಾರ್ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಗುಂಜೂರು ಯೂತ್ ವಾಲಿಬಾಲ್ ಕ್ರೀಡಾಪಟುಗಳಿಂದ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ಒತ್ತಡದ ಜೀವನದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ ಇದರಿಂದ ಮುಕ್ತಿ ಹೊಂದಲು ಹಾಗೂ ದೈಹಿಕ ಸದೃಡತೆ ಪಡೆಯಲು ಕ್ರೀಡೆಗಳು ಪೂರಕವಾಗಿದೆ ಎಂದು ನುಡಿದರು.
ಯುವಜನತೆ ಪಠ್ಯದ ಜೋತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸರ್ವತೋಮುಖ ಬೆಳವಣಿಗೆಗೆ ಹೊಂದುವಂತೆ ಸಲಹೆ ನೀಡಿದರು.
ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನದ ಮೂಲಕ ದೇಶಕ್ಕೆ ಕೀರ್ತಿ ತಂದುಕೊಡುವ ಅವಕಾಶಗಳಿದ್ದು ಸರ್ವತೋಮುಖ ಪ್ರಗತಿಗೆ ಆದ್ಯತೆ ನೀಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸತೀಶ್ ರೆಡ್ಡಿ, ವಿಟಿಬಿ ಬಾಬುರೆಡ್ಡಿ,ಗುಂಜೂರು ರಾಮಕೃಷ್ಣಪ್ಪ,ಬಸವರಾಜು, ವರ್ತೂರು ಸುರೇಶ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.