ಕ್ರೀಡೆಯಿಂದ ದೈಹಿಕ, ಮಾನಸಿಕ ಶಕ್ತಿ ವೃದ್ದಿ

ಸಿರವಾರ.ಜ.೧೧- ಪುಸ್ತಕ ಅಭ್ಯಾಸದಿಂದ ಜ್ಞಾನ ವೃದ್ದಿಯಾದರೆ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ದಿಯಾಗುತ್ತದೆ, ಆ ತಂಡ ಈ ತಂಡ ಎಂದು ಬೇಧ ಭಾವ ಮಾಡಿಕೊಳ್ಳದೆ, ಕ್ರೀಡಾಸಕ್ತಿಯಿಂದ ಆಟದಲ್ಲಿ ಭಾಗವಹಿಸಿ ಎಂದು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು ಹೇಳಿದರು.
ಪಟ್ಟಣದ ನಾಗಡದಿನ್ನಿ ರಸ್ತೆಯಲ್ಲಿರುವ ಕೆ. ಅಸ್ಲಾಂಪಾಷ ಲೇಔಟ್‌ನಲ್ಲಿ ಇಂದಿನಿಂದ ಪ್ರಾರಂಭವಾಗಿರುವ ಸಿರವಾರ ಪ್ರೀಮಿಯರ್ ಲೀಗ್೨೦೨೧ ಕ್ರಿಕೆಟ್ ಪಂದ್ಯವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವಕರು ದುಷ್ಚಟಗಳಿಂದ ದೂರವಾಗಿ ಇಂತಹ ಕ್ರೀಡೆಗಳಲ್ಲಿ ತಮನೂ ತಾವು ತೊಡಗಿಸಿಕೊಂಡು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿ ಕೀರ್ತಿ ತರಬೇಕು. ಇಂತಹ ಕ್ರೀಡಾಕೂಟಗಳು ಇಂದಿನದಿನಗಳಿಗೆ ಅವಶ್ಯಕವಾಗಿ ಬೇಕು ಎಂದರು.
ವಾಣೀಜ್ಯೋದ್ಯಮಿ ಹಾಗೂ ಜೆಡಿಎಸ್ ಹಿರಿಯ ಮುಖಂಡ ಜಿ.ಲೋಕರೇಡ್ಡಿ ಮಾತನಾಡಿ ಯುವಕರು ಕ್ರೀಡಾಸಕ್ತಿಯನ್ನು ಮೈಗೂಡಿಸಿ ಕೊಳ್ಳಬೇಕು, ಕ್ರೀಕೆಟ್ ಜೊತೆಗೆ ಮುಂದಿನ ದಿನಗಳಲ್ಲಿ ಕಬ್ಬಡ್ಡಿ ಕೊ ಕೊ ಪಂದ್ಯಾವಳಿಯನ್ನು ಆಯೋಜನೆ ಮಾಡುವಂತಾಗಲಿ. ಹಾಲಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರು ಸಿರವಾರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ೨ ಕೊ. ರೂ ಹಣ ಮಿಸಲಿರಿಸಿದ್ದಾರೆ. ಸ್ಥಳದ ಹೆಸರು ಬದಲಾವಣೆ ಮಾಡಬೇಕಿರುವದರಿಂದ ವಿಳಂಬವಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗುತ್ತದೆ ಎಂದರು. ಜಿ.ಪಂ ಮಾಜಿ ಸದಸ್ಯ ಕೆ.ಅಸ್ಲಾಂಪಾಷ ಮಾತನಾಡಿ, ಯುವ ಜನತೆ ದೇಶದ ಸಂಪತ್ತು ಇಂದು ಅನೇಕ ಯುವಕರು ಮದ್ಯಪಾನ ದೂಮಪಾನ ವ್ಯಸನಿಗಳಾಗಿ ಹಾಳಾಗುತ್ತಿದೆ.
ಆದರೆ ನಮ್ಮ ಸಿರವಾರ ಯುವ ತಂಡವು ಅವುಗಳಿಂದ ದೂರ ಇದ್ದು ಇಂತಹ ಕ್ರೀಡೆಗಳಿಂದ ಯುವ ಕ್ರೀಡಾಪಟು ಕ್ರೀಡೆಗಳ ಕಡೆ ವಾಲುವಂತೆ ಮಾಡುತ್ತಿದ್ದಾರೆ ಎಂದರು. ಮಂಜೂರು ಸಾನ್ ಖಾಜಿ, ತಾ.ಪಂ ಮಾಜಿ ಅಧ್ಯಕ್ಚ ದಾನನಗೌಡ, ರಮೆಶ ದರ್ಶನಕರ್, ಉಮಾಪತಿ ಚುಕ್ಕಿ,ವೈ ಭೂಪನಗೌಡ, ಗುರುಗೌಡ,ಪ.ಪಂ ಉಪಾಧ್ಯಕ್ಷ ಚನ್ನಬಸವ ಗಡ್ಲ, ಸದಸ್ಯರಾದ ಸಂದೀಪ್ ಪಾಟೀಲ್, ಇಮಾಮ್, ಮೌಲಾಸಾಬ್ ವರ್ಚಸ್, ಹಸೇನ್ ಅಲಿ, ಹಾಜಿಚೌದ್ರಿ, ಮಹಿಬೂಬ ಸಾಬ್ ದೊಡ್ಮನೆ, ವಲಿಗುತ್ತೆದಾರ ಸೇರಿದಂತೆ ಇನ್ನಿತರರು ಇದ್ದರು.