ಕ್ರೀಡೆಯಿಂದ ದೈಹಿಕ,ಮಾನಸಿಕ ಬೆಳವಣಿಗೆಗೆ ಸಹಕಾರಿ

ಆನೇಕಲ್. ಮೇ. ೨೨- ಯುವಕರು ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗಿದೆ. ಪ್ರತಿಯೊಂದು ಕ್ರೀಡಾಕೂಟಗಳಲ್ಲಿ ಆಟಗಾರರು ಕ್ರೀಡಾಮನೋಭಾವದಿಂದ ಭಾಗವಹಿಸಬೇಕು ಎಂದು ಚಂದಾಪುರ ಪುರಸಭೆ ಮಾಜಿ ಅಧ್ಯಕ್ಷ ಹೀಲಲಿಗೆ ವೇಣುಗೋಪಾಲ್ ತಿಳಿಸಿದರು.
ಅವರು ಚಂದಾಪುರ ಪುರಸಭೆ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿ ಆಯೋಜಿಸಿದ್ದ ಹೀಲಲಿಗೆ ಪ್ರೀಮಿಯರ್ ಲೀಗ್ ನ ೨ ನೇ ಸೀಜನ್ ಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವವನ್ನು ಬೆಳಸಿಕೊಂಡು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು.
ಸೋಲು-ಗೆಲುವು ಕೇವಲ ಕ್ರೀಡೆಗಳಿಗೆ ಮಾತ್ರ ಸೀಮಿತವಾಗಬಾರದು, ತಮ್ಮ ಜೀವನದಲ್ಲೂ ಸಹ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಆಯೋಜಕರಾದ ಹೀಲಲಿಗೆ ಸಂತೋಷ್ (ಟೋನಿ) ಮಾತನಾಡಿ ಕ್ರೀಡೆಗಳು ಮನುಷ್ಯನ ಆರೋಗ್ಯ ವದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುವ ಜತೆಗೆ ನವ ಚೈತನ್ಯ ತುಂಬುತ್ತವೆ. ಕಾರಣ ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡೆಯಲ್ಲಿ ಭಾಗವಹಿಸಬೇಕು. ಹೀಲಲಿಗೆ ಗ್ರಾಮದ ಯುವಕರಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈಗಾಗಲೇ ಐಪಿಎಲ್ ಮಾದರಿಯಲ್ಲಿಯೇ ಹೀಲಲಿಗೆ ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಮೊದಲನೆ ಸೀಜನ್ ಆರಂಭಿಸಿ ಯಶಸ್ವಿಯಾಗಿದ್ದು ಮುಂದುವರೆದ ಬಾಗವಾಗಿ ಇಂದು ಹೀಲಲಿಗೆ ಪ್ರೀಮಿಯರ್ ಲೀಗ್ ನ ೨ ನೇ ಸೀಜನ್ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.
ಇನ್ನು ಒಟ್ಟು ೭ ತಂಡಗಳು ಹೀಲಲಿಗೆ ಪ್ರೀಮಿಯರ್ ಲೀಗ್ ೨ ಸೀಜನ್ ನಲ್ಲಿ ಆಟವನ್ನು ಆಡಲಿದ್ದು, ವಿಶೇಷವಾಗಿ ಐಪಿಎಲ್ ಮಾದರಿಯಲ್ಲಿಯೇ ಆಟಗಾರರ ಹರಾಜು ಪ್ರಕ್ರಿಯೆಯನ್ನು ಸಹ ನಡೆಸಲಾಗಿದೆ.
ಕ್ರೀಡಾಕೂಟದಲ್ಲಿ ಹೀಲಲಿಗೆ ಲಯನ್ಸ್ ತಂಡದ ಮಾಲೀಕರಾದ ವೇಣು ಗೋಪಾಲ್ ಮತ್ತು ರಮೇಶ್, ಮತ್ತು ಹೀಲಲಿಗೆ ಲಜೆಂಟ್ಸ್ ತಂಡದ ಮಾಲೀಕರಾದ ಮದು ಹಾಗೂ ಮನು ವಾರಿಯರ್‍ಸ್ ತಂಡದ ಮಾಲೀಕರಾದ ವಿಕೆಟಿ ರಾಮು ಮತ್ತು ಹೀಲಲಿಗೆ ಈಗಲ್ಸ್ ತಂಡದ ಮಾಲೀಕರಾದ ಕೀರ್ತಿರಾಜ್ ಹಾಗೂ ಕೆಂಪೇಗೌಡ ಕಿಕ್ರೆಟರ್‍ಸ್ ತಂಡದ ಮಾಲೀಕರಾದ ಕಿರಣ್ ಹಾಗೂ ರಾಜೇಶ್, ಬಜರಂಗಿ ಬಾಯ್ಸ್ ತಂಡದ ಮಾಲೀಕರಾದ ಉಮೇಶ್ ಮತ್ತು ಸುಜಯ್ ಮತ್ತು ಹೀಲಲಿಗೆ ಸೀನಿಯರ್ ಟೈಗರ್‍ಸ್ ತಂಡದ ಮಾಲೀಕರಾದ ಮಂಜುನಾಥ್ ಮತ್ತು ಗಜೇಂದ್ರರವರು. ಹಾಗೆಯೇ ಆಯೋಜಕರಾದ ಹೀಲಲಿಗೆ ಸಂತೋಷ್ (ಟೋನಿ), ನವೀನ್, ಪ್ರಶಾಂತ್, ಗುರು, ನಿತೇಶ್, ಸುನೀಲ್, ಎಂ.ಜೆ. ಮಂಜುನಾಥ್, ಕಾರ್ತಿಕ್, ಕಿರಣ್, ಮನು, ಉದಯ್, ನಂದ, ಅಭಿ, ಹರೀಶ್, ಕುಮಾರ್ ಬಾಗವಹಿಸಿದ್ದರು.