ಕ್ರೀಡೆಯಿಂದ ಆರೋಗ್ಯ ಸದೃಢ

ಹುಬ್ಬಳ್ಳಿ,ಮಾ25: ಶ್ರೀಮತಿ ಶಕುಂತಲಾ ನರ್ಸಿಂಗ್ ಫಾರ್ಮಾಸುಟಿಕಲ್ಸ್ ಸಾಯನ್ಸ್ ಇನ್ಸ್ಟಿಟ್ಯುಷನ್‍ನ ವಾರ್ಷಿಕ ಕ್ರೀಡಾ ಮಹೋತ್ಸವದ ಮುಖ್ಯ ಅತಿಥಿಗಳಾಗಿ ಅರ್ಜುನ ಪ್ರಶಸ್ತಿ ವಿಜೇತರಾದ ಸೆಬ್‍ಸ್ಟ್ಯಾನ ಝಾವಿಯರ ಮತ್ತು ಅಂತಾರಾಷ್ಟ್ರೀಯ ಓಟಗಾರ್ತಿ ಕಮಲಾ ಸಿದ್ದಿಕಿಯವರು ಆಗಮಿಸಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾಸಕ್ತಿ ಬೆಳಸಿಕೊಂಡಲ್ಲಿ ದೇಹದ ಆರೋಗ್ಯ ಸದೃಢವಾಗಿರುತ್ತದೆ ಎಂದು ಕರೆ ನೀಡಿದರು.
ಹು-ಧಾ ಚೇರಮನ್ ಶಾಖಿರ ಸನದಿ ಕ್ರೀಡಾ ಸಮಾರಂಭ ಉದ್ಘಾಟಿಸಿದರು. ಪ್ರಿನ್ಸಿಪಾಲ್ ರಚೇಲ ಪ್ರಕಾಶ ಕಾರ್ಯಕ್ರಮ ನಿರ್ವಹಿಸಿದರು. ಇನ್ಸ್ಟಿಟ್ಯುಷನ್‍ನ ಮೇಲ್ವಿಚಾರಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.