ಕ್ರೀಡೆಯಲ್ಲಿ ಸೋಲು ಗೆಲವು ಸಮನಾಗಿ ಸ್ವಿಕರಿಸಿ:ಕೊಪ್ಪದ

ತಾಳಿಕೋಟೆ:ಜು.31: ಕ್ರೀಡೆ ಎಂಬುದು ದೈಹಿಕವಾಗಿ ಆರೋಗ್ಯವಾಗಿರಲು ಪೂರಕವಾದುದ್ದಾಗಿದ್ದು ಗೆದ್ದೆವು ಎಂಬ ಅಹಂ ಬೇಡಾ ಸೋತೇವೂ ಎಂದು ಕುಗ್ಗುದು ಬೇಡಾ ವಿದ್ಯಾರ್ಥಿಗಳು ಸೋಲು ಗೆಲವು ಸಮಾನಾಗಿ ಸ್ವಿಕರಿಸಬೇಕೆಂದು ತಾಲೂಕಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಆರ್.ಎಲ್.ಕೊಪ್ಪದ ಅವರು ಹೇಳಿದರು.

  ಶನಿವಾರರಂದು ಮೈಲೇಶ್ವರ ಕ್ರಾಸ್‍ನಲ್ಲಿರುವ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ನಡೆದ 2022-23ನೇ ಸಾಲಿನ ತಾಳಿಕೋಟೆ ಪೂರ್ವ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ನೇರವೇರಿಸಿ ಮಾತನಾಡುತ್ತಿದ್ದ ಅವರು "ವಿದ್ಯಾರ್ಥಿಗಳು ಸೋತೆನೆಂದು ಎದೆಗುಂದದೆ ಪ್ರಾಮಾಣಿಕವಾಗಿ ಆಟ ಆಡುವುದರ ಮೂಲಕ ನಿಮ್ಮಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಬೇಕೆಂದ ಅವರು ಕ್ರೀಡೆ ಎಂಬುದು ವಿದ್ಯಾರ್ಥಿಗಳಲ್ಲಿ ದೈಹಿಕವಾಗಿ ಸದೃಢಗೊಳಿಸುವದರೊಂದಿಗೆ ಮಾನಸಿಕವಾಗಿ ಸ್ಥಿತಿವಂತತೆಯನ್ನು ಮಾಡುತ್ತದೆ ಅಲ್ಲದೇ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎನ್. ಬಿ. ನಡುವಿನಮನಿಯವರು ಮಾತನಾಡಿ “ಆಟ ಆಡುವುದರ ಮೂಲಕ ಸಧೃಢ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ, ಅಂತೆಯೇ ಬೇರೆ-ಬೇರೆ ಪ್ರೌಢಶಾಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಕ್ರೀಡಾ ನಿಯಮಗಳಿಗೆ ಅನುಗುಣವಾಗಿ ಭಾಗವಹಿಸಿ ಆಟ ಆಡಬೇಕೆಂದರು.

ವೇದಿಕೆಯ ಮೇಲೆ ತಾಳಿಕೋಟೆ ವಲಯದ ಶಿಕ್ಷಣ ಸಂಯೋಜಕರಾದ ಎಸ್.ಎಸ್. ಹಿರೇಮಠ ಅವರು ಉಪಸ್ಥಿತರಿದ್ದರು.

ಬ್ರಿಲಿಯಂಟ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಜಿ.ಎಂ. ಕಡ್ಲಿಮಟ್ಟಿರವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಎಲ್ಲಾ ಅತಿಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತು ಬ್ರಿಲಿಯಂಟ್ ಶಾಲೆಯ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂಧಿ ವರ್ಗದವರು ಶುಭ ಹಾರೈಸಿದರು.

ಬ್ರಿಲಿಯಂಟ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರುಗಳಾದ ವಿನಾಯಕ ಪಟಗಾರ ಸ್ವಾಗತಿಸಿದರು. ಎಸ್.ಸಿ. ಕರಡಿ ನಿರೂಪಿಸಿದರು. ಲಕ್ಷ್ಮಣ ಬಸನಾಳ ವಂದಿಸಿದರು.