ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಕರೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.23: ಕ್ರೀಡೆಯು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡೆಯಲ್ಲಿ ಭಾಗವಹಿಸಬೇಕು.
ನಗರದ ತಾಲ್ಲೂಕ್ರೀಡಾಂಗಣದಲ್ಲಿ  ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ತಾಲ್ಲೂಕು ಮಟ್ಟದ ಕ್ರೀಡಾಕೂಟ ನಡೆಸಲಾಯಿತು.
ಶಾಲೆಯಲ್ಲಿ ಉತ್ತಮವಾದ ತರಬೇತಿ ಇರುತ್ತದೆಯೋ ಮಕ್ಕಳು ಒಳ್ಳೆಯ ರೀತಿಯ ಕ್ರೀಡೆಗಳಲ್ಲಿ ಹೊರ ಹೊಮ್ಮಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಅತಿ ಉತ್ತಮವಾದ ಕ್ರೀಡಾಪುಟಗಳು ಇರುತ್ತಾರೆ. ಅವರನ್ನು ದೈಹಿಕ ಶಿಕ್ಷಣ ಶಿಕ್ಷಕರು ಗುರುತಿಸಿ ಸಮಾಜಕ್ಕೆ ಪರಿಚಯಿಸಿ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕೊಂಡ್ಯೋಯುವ ಶಕ್ತಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಇರುತ್ತದೆ ಹಾಗೂ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಮುಂದೆ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ನಿಮ್ಮ ಪ್ರತಿಭೆಯನ್ನು ತೋರಿಸುವುದಕ್ಕೆ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದು ಪ್ರಭಾರಿ‌ ಟಿ.ಪಿ.ಒ ರಮೇಶ್‌ ಹೇಳಿದರು.
ಪ್ರಾಥಮಿಕ ಬಾಲಕಿಯರ ವಿಭಾಗದ ಥ್ರೋಬಾಲ್ ಪೈನಲ್ ಪಂದ್ಯದಲ್ಲಿ ನಗರದ ಎಸ್.ಇ.ಎಸ್ ಶಾಲೆಯ ಮಕ್ಕಳು ಜಯವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ಪ್ರಾಥಮಿಕ ದೈಹಿಕ ಶಿಕ್ಷಕ‌ ಸಂಘದ ಉಪಧ್ಯಾಕ್ಷ ಈರಣ್ಣ, ಚನ್ನಪ್ಪ, ಅಜ್ಮೀರ್, ಕೀರಣ್ ಕುಮಾರ್, ಗಡ್ಡೆಖಾದರ ಭಾಷ, ರಾಮೂರ್ತಿ, ಉಪೇಂದ್ರ, ವೈ.ಡಿ ವೆಂಕಟೇಶ್, ಮಂಜುನಾಥ, ದಾನಪ್ಪ,  ಇದ್ದರು.