ಕೆಜಿಎಫ್,ಜೂ.೫- ನಗರ ಪ್ರದೇಶದ ಸರಹದ್ದಿನಲ್ಲಿರುವ ಯರನಗನಹಳ್ಳಿ ಗ್ರಾಮದಲ್ಲಿ ೨೩ ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ ಗ್ರಾಮದ ನಿವಾಸಿ ಕೆಎಸ್‌ಆರ್‌ಟಿಸಿ ನೌಕರ ಗೋಪಿ ರವರ ನೆನೆಪಿಗಾಗಿ ಕ್ರಿಕೆಟ್ ಟೂರ್ನ್‌ಮೆಂಟ್‌ನ್ನು ಗ್ರಾಮದ ಯುವಕರು ಅಯೋಜಿಸಿದ್ದರು ಸಣ್ಣ ಗ್ರಾಮವಾದರು ಗ್ರಾಮದ ಪ್ರತಿ ಕುಟುಂದಲ್ಲೂ ಕ್ರೀಡೆಯಲ್ಲಿ ಆಸಕ್ತಿದಾಯಕವಿರುವ ಕ್ರೀಡಾಪಟುಗಳು ವಾಸಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ
ಗ್ರಾಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಜೇತ ಹಾಗೂ ಪರಾಜೀತ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಿ ಯುವಕರನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಬಿಇಎಂಎಲ್ ನೌಕರರ ಸಂಘದ ಅಧ್ಯಕ್ಷ ಅಂಜನೇಯರೆಡ್ಡಿ ಇಂದಿನ ಯುವಕರೆ ಮುಂದಿನ ದೇಶದ ಪ್ರಜೆಗಳಾಗಿದ್ದು ಗ್ರಾಮದಲ್ಲಿ ಜನಿಸಿ ದೇಶದ ವಿವಿಧೆಡೆಗಳಲ್ಲಿ ನೌಕರಿ ಮಾಡುತ್ತಿದ್ದರು ಎಲ್ಲರು ಒಂದಾಗಬೇಕು ಎಂಬ ಉದ್ದೇಶದಿಂದ ಇಂತಹ ಉತ್ತಮವಾದ ಕ್ರೀಡೆಯನ್ನು ಅಯೋಜಿಸಿರುವುದು ಸಂತೋಷದಾಯಕವಾದುದ್ದು ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಗೆಲುವಿಗೆ ಸೇಣಸಾಟ ನಡೆಸುತ್ತಾರೆ ಅಂತಿಮ ವಾಗಿ ಒಬ್ಬರಿಗೆ ಮಾತ್ರ ಗೆಲುವು ದೊರಕುತ್ತದೆ ಆದ್ದರಿಂದ ಕ್ರೀಡೆಯಲ್ಲಿ ಜಯಗಳಿಸಿದವರು ಬೀಗುವುದು ಬೇಡ ಸೋತವರು ನಿರಾಶರಾಗದೆ ಮತ್ತೋಮ್ಮೆ ಪ್ರಯತ್ನಿಸಿ ಜಯವನ್ನುಗಳಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದರು.
ಈ ವೇಳೆ ಗ್ರಾಮದ ಹಿರಿಯರಾದ ವಿಜಯರಾಘವರೆಡ್ಡಿ ಮಾತನಾಡಿ ಇಂತಹ ಕ್ರಿಡೆಗಳಿಂದ ಯುವಕರ ಮತ್ತು ಕುಟುಂಭಗಳ ಮದ್ಯೆ ಉಂಟಾಗುವ ದ್ವೇಷ, ಅಸೂಯೆಗಳು ಮಾಯವಾಗಿ ಸೌಹಾರ್ಧತೆ ಕಂಡು ಬರುತ್ತದೆ ಯುವಕರು ಹಿರಿಯರನ್ನು ಗೌರಸುವುದನ್ನು ಕಲಿಯಬೇಕು ಮತ್ತು ಇಂತಹ ಕ್ರೀಡೆಗಳಲ್ಲಿ ಎಲ್ಲರು ಭಾಗಿಯಾಗಬೇಕು ಎಂದು ಹೇಳಿದರು.