ಕ್ರೀಡೆಗೆ ಆದ್ಯತೆ ನೀಡಲು ಸಲಹೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.01: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿ ಮೀಸಲು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆಗೂ ಆದ್ಯತೆ ನೀಡಬೇಕು ಎಂದು ಜಿಲ್ಲಾ ದೈಹಿಕ ಸಂಘದ ಗೌರವ ಅಧ್ಯಕ್ಷ ಚನ್ನಪ್ಪ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.
ತಾಲ್ಲೂಕಿನ ಹಚ್ಚೋಳ್ಳಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಿಯು ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಿತು.
ಶಾಸಕ ಬಿ.ಎಂ ನಾಗರಾಜ ಕ್ರೀಡಾ ಜ್ಯೋತಿಯನ್ನು ಹಚ್ಚುವುದರ ಮೂಲಕ ಕ್ರೀಡೆಗಳ ಉದ್ಘಾಟನೆಯನ್ನು  ಮಾಡಿದರು. ನಂತರ  ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ರಿಯಾಶೀಲವಾಗಬೇಕಾದರೆ ಕ್ರೀಡಾ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಗಳಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯೊಂದಿಗೆ ಭಾಗವಹಿಸಬೇಕು. ಬದುಕನ್ನು ಸಹ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಮತ್ತು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಡಾಕ್ಟರ್, ಎಂಜಿನಿಯರ್, ವಕೀಲರಾಗಬೇಕೆಂಬ ಆಸೆ ಇಟ್ಟುಕೊಳ್ಳುವಂತೆ ಆಸೆ ಪಡುವಂತೆ ಉತ್ತಮ ಕ್ರೀಡಾಪಟುಗಳಾಗಬೇಕು ಎನ್ನುವ ಗುರಿ ಹೊಂದಬೇಕು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಬೇಕು ಎಂದು ದೈಹಿಕ ಶಿಕ್ಷಕ ಪ್ರಭಾರಿ ಟಿಪಿಒ ರಮೇಶ್ ಹೇಳಿದರು.
ತಾಲ್ಲೂಕಿನ 08 ಪಿ.ಯು ಕಾಲೇಜುಗಳಿಂದ 400 ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ವಿವಿಧ ಕ್ರೀಡೆಗಳಲ್ಲಿ  ಭಾಗವಹಿಸಿದ್ದರು.
ತಾಲೂಕು ಆರೋಗ್ಯ ಅಧಿಕಾರಿ ಈರಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಸ್ವಾಮಿ ಸಾಹುಕಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ನಾಗಮ್ಮ ಸಣ್ಣಮುದುಕಪ್ಪ, ಉಪಾಧ್ಯಕ್ಷೆ ಶ್ರಿದೇವಿ ನರಸಪ್ಪ, ಗ್ರಾಮದ ಪಿಡಿಒ ಮಂಜುಳ, ಕಾಲೇಜಿನ ಪ್ರಾಚಾರ್ಯರ ಮಹೇಶ್, ದೈಹಿಕ ಶಿಕ್ಷಕರಾದ ಅಜ್ಮೀರ್, ಉಸ್ಮಾನ್, ಉಪೇಂದ್ರ, ಗಡ್ಡೆಖಾದರಭಾಷ, ವೈ.ಡಿ ಮಂಜುನಾಥ, ದಾನಪ್ಪ, ಕೀರಣ, ಆನಂದ, ಮಲ್ಲಿಕಾರ್ಜನಗೌಡ ಇತರರು, ಹಚ್ಚೋಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಾಲೇಜು ಸಿಬ್ಬಂದಿಗಳು ಮತ್ತು ಕ್ರೀಡಾಪಟುಗಳು ಇದ್ದರು.