ಕ್ರೀಡೆಗಳು ಶಾರೀರಿಕ ಹಾಗೂ ಬೌದ್ಧಿಕ ಅಭಿವೃದ್ಧಿಗೆ ಸಹಕಾರಿಃ ಪ್ರಭು ಬಿರಾದಾರ

ವಿಜಯಪುರ, ಜು.23-ಕ್ರೀಡೆಗಳು ಮಕ್ಕಳ ಶಾರೀರಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ಅಲ್ಲದೆ ಅವುಗಳಿಂದ ಬೌದ್ಧಿಕ ಅಭಿವೃದ್ಧಿ ಹಾಗೂ ಮನಸ್ಸು ಚೈತನ್ಯದಿಂದ ಕೂಡಿರುತ್ತದೆ ಎಂದು ಶಿಕ್ಷಣ ಸಂಯೋಜಕ ಪ್ರಭು ಬಿರಾದಾರ ಹೇಳಿದರು.
ಕಾಖಂಡಕಿ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳಲ್ಲಿ ಅಥಿತಿಯಾಗಿ ಮಾತನಾಡುತ್ತಾ, “ಇಂತಹ ಕ್ರೀಡೆಗಳು ಮಕ್ಕಳ ಮುಂದಿನ ಭವ್ಯ ಭವಿಷ್ಯಕ್ಕೆ ಪ್ರೋತ್ಸಾಹ ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ‘ಎಂದರು.
ಕಾರ್ಯಕ್ರಮದಲ್ಲಿ ಬಿ ಆರ್ ರಾಠೋಡ್ ಪಿ ಡಿ ಓ, ಗ್ರಾ ಪಂ ಸದಸ್ಯ ಸಂಕನಗೌಡ ಪಾಟೀಲ್, ದೈ ಗೊಂಡ ದೈಹಿಕ ಶಿಕ್ಷಣ ಪರಿವೀಕ್ಷಕರು ಗ್ರಾಮೀಣ, ರವೀಂದ್ರ ಉಗಾರ ಅಧ್ಯಕ್ಷರು ಪ್ರಾ ಶಿ ಸಂಘ ಬಬಲೇಶ್ವರ, ಎಸ್ ವಿ ಕುಲಕರ್ಣಿ ಬಿ ಆರ್ ಪಿ, ಬಸಲಿಂಗಪ್ಪ ಸಿ ಆರ್ ಪಿ, ಜಿಲ್ಲಾ ಆದರ್ಶ ಶಿಕ್ಷಕರಾದ ಶ್ರೀಮಂತ ಡೊಣಗಿ ಮಾತನಾಡಿದರು.
ಅಥಿತಿಗಳಾಗಿ ಗ್ರಾ ಪಂ ಅಧ್ಯಕ್ಷರು ರೇಣುಕಾ ಸೀತಿಮನಿ, ಭೀಮಪ್ಪ ದೊಡಮನಿ, ಶ್ರೀಶೈಲ ಕಲ್ಲಾರಿ, ಶಿವಪ್ಪ ಸಿದ್ದರಡ್ಡಿ, ಲಕ್ಶ್ಮಣ ಸಿದ್ದರಡ್ಡಿ, ಉದಯಕುಮಾರ ಕೋಟ್ಯಾಳ, ರಾವುಸಾಹೇಬ ಗವಾರಿ, ಎಲ್ ಐ ಕೋರಿ, ಐ ಬಿ ಹಡಪದ, ಬಾರಾಸಕಾಳೆ, ನಾಗರಾಜ ಕೋಲಕಾರ, ಸಂಗಪ್ಪ ಉತ್ನಾಳ, ಕಲ್ಲಪ್ಪ ಕೋಟ್ಯಾಳ, ಪೂಜಾ ಮಮದಾಪುರ, ರಾಜಶೇಖರ ಹಿರೇಮಠ, ಮಠಪತಿ , ಜಿ ಸಿ ಬಿರಾದಾರ ಇದ್ದರು.ಮಾತಾಜಿ ಶಿಂಪಿ ನಿರೂಪಿಸಿದರು. ಶ್ರೀಮಂತ ಡೊಣಗಿ ಸ್ವಾಗತಿಸಿದರು. ಎಸ್ ಎ ಹರಿಜನ ವಂದಿಸಿದರು.