
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 22 :- ಕ್ರೀಡೆಗಳು ವ್ಯಕ್ತಿಯ ವಿಕಸನಕ್ಕೆ ಸಹಕಾರಿಯಾಗಿದ್ದು ದೈಹಿಕ ಬೆಳವಣಿಗೆ, ಮಾನಸಿಕ ನೆಮ್ಮದಿ ತರುವ ಮೂಲಕ ಉತ್ತಮ ಆರೋಗ್ಯ ಕಾಪಾಡುತ್ತದೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ತಮ್ಮಣ್ಣ ಎನ್ ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಅಮರದೇವರಗುಡ್ಡದಲ್ಲಿ ನಾಗರ ಪಂಚಮಿ ಪ್ರಯುಕ್ತ ಪ್ರಿಮೀಯರ ಲೀಗ್ ನಿಂದ 7ನೇ ಆವೃತ್ತಿಯ ಕ್ರಿಕೆಟ್ ಟೂರ್ನಿಮೆಂಟ್ ಗೆ ಬ್ಯಾಟ್ ಮಾಡುವ ಮೂಲಕ ಚಾಲನೆ ಮಾತನಾಡುತ್ತ ಕ್ರೀಡೆಯಲ್ಲಿ ಹೆಚ್ಚಾಗಿ ಈಗ ಕ್ರಿಕೆಟ್ ಆಟವನ್ನು ಆಡುತ್ತಿದ್ದೂ ನಮಗೂ ಈ ಕ್ರಿಕೆಟ್ ಪ್ರಿಯವಾದ ಆಟವಾಗಿದ್ದು ಅಮರದೇವರಗುಡ್ಡದಲ್ಲಿ ಸಹ ನಾವು ಚಿಕ್ಕವರಾಗಿದ್ದ ಬಂದು ಈ ಸ್ಥಳದಲ್ಲಿ ಆಟವಾಡಿದ ನೆನಪು ಇದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಶಿಕ್ಷಕರುಗಳಾದ ವೀರೇಶ, ರಾಘವೇಂದ್ರ, ಇಂಜಿನಿಯರ್ ಕೊಟ್ರೇಶ್, ವಿ ರಮೇಶ, ದುರುಗಪ್ಪ, ಅಜ್ಜಪ್ಪ, ಹನುಮಂತಪ್ಪ, ಬಸಣ್ಣ, ವೀರಣ್ಣ, ಮಲ್ಲಣ್ಣ, ಪ್ರಹ್ಲಾದ್ ಇತರರು ಉಪಸ್ಥಿತರಿದ್ದರು.