ಕ್ರೀಡೆಗಳು ಮನುಷ್ಯನ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ

ಚಾಮರಾಜನಗರ, ಏ.07- ಕ್ರೀಡೆಗಳು ಮನುಷ್ಯನ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಿನ ಕಾಲದಿಂದಲ್ಲೂ ಕ್ರೀಡೆಗಳಿಗೆ ಅದರದ್ದೇ ಮಹಾತ್ವ ಇದೇ, ಕ್ರೀಡಾಪಟುಗಳು ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂ ಗಣದಲ್ಲಿ ಭಾರತದ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಪಂ, ಮತ್ತು ಯುವಜನಸೇವೆ ಮತ್ತು ಕ್ರೀಡಾಇಲಾಖೆ ವತಿಯಿಂದ ನಡೆದ ತಾಲೂಕುಮಟ್ಟದ ವಾಲಿಬಾಲ್, ಕಬ್ಬಡಿ ಕ್ರೀಡಾಕೂಟವನ್ನು ವಾಲಿಬಾಲ್ ಎಸೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ಪಠ್ಯೆತರ ಚಟುವಟಿಕೆಗಳ ಒಂದು ಭಾಗವೇ ಆಗಿದೆ, ಇಂದಿನ ಯುವ ಸಮುದಾಯ ಪಠ್ಯಸೇರಿದಂತೆ ಬದುಕಿಗೆ ನೆರವಾಗುವ ಚಟುವಟಿಕೆಗಳತ್ತ ಗಮನಹರಿಸದೇ ತಮ್ಮ ಅಮೂಲ್ಯವಾದ ಸಮಯ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮಾನಸಿಕ ಹಾಗೂ ದೈಹಿಕವಾಗಿ ನಮ್ಮನ್ನು ಸದೃಡವಾಗಿಸುವ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಆಕ್ರಮಣಕಾರಿಯಾಗಿ ಆಡುವ ನೈಪುಣ್ಯತೆ ಬೆಳೆಸಿಕೊಳ್ಳಬೇಕು ಎಂದರು.
ಜಿ.ಪಂ. ಉಪಾಧ್ಯಕ್ಷೆ ಶಶಿಕಲಾ ಸೋಮಲಿಂಗಪ್ಪ ಮಾತನಾಡಿ, ಈಚೆಗೆ ತಾಲೂಕಿನ ಹೆಗ್ಗವಾಡಿಯಲ್ಲಿ ಕೃಷಿ ಇಲಾಖೆಯವರು ಮಣ್ಣು ಮತ್ತು ನೀರಿನ ಸಂರಕ್ಷಣೆ ಕುರಿತು ಕಾರ್ಯಕ್ರಮ ಆಯೋಜಿಸುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿದ್ದರು, ಹಾಗೆಯೇ ಪ್ರತಿಯೊಂದು ಇಲಾಖೆಯೂ ಒಂದೊಂದು ಅಂಶವನ್ನು ಇಟ್ಟುಕೊಂಡು, ಕಾರ್ಯಕ್ರಮ ಆಯೋಜಿಸಬೇಕು, ಹೆಣ್ಣು ಮಕ್ಕಳು ಕಬ್ಬಡಿಯಂತಹ ದೇಶಿ ಕ್ರೀಡೆಯಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಈಚೆಗೆ ಪಾಶ್ಚಿಮಾತ್ಯ ಕ್ರೀಡೆಯಾದ ಕ್ರಿಕೆಟ್ ಬಗ್ಗೆ ಯುವಕರು ಆಸಕ್ತಿ ವಹಿಸುತ್ತಿದ್ದಾರೆ, ಇದರಿಂದ ದೇಶಿಯ ಕ್ರೀಡೆಗಳಾದ ಕೋಕೋ, ಕಬ್ಬಡಿ, ಚೆಸ್ ಕ್ರೀಡೆಗಳು ನಶಿಸಿಹೋಗುತ್ತಿವೆ. ಇಲಾಖೆಯವರು ದೇಶಿಕ್ರೀಡೆಗಳ ಆಯೋಜನೆ ಮಾಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಕುರಿತು ಚುಡಾ ಅಧ್ಯಕ್ಷ ಪಿ.ಬಿ. ಶಾಂತಮೂರ್ತಿ ಮಾತನಾಡಿದರು. ಯುವಜನಸೇವೆ ಮತ್ತು ಕ್ರೀಡಾಇಲಾಖೆ ಸಹಾಯಕ ನಿರ್ದೇಶಕ ಚೆಲು ವಯ್ಯ, ಪುಟ್‍ಬಾಲ್ ತರಬೇತುದಾರ ಗೋಪಾಲ್ ರಂಗಸ್ವಾಮಿ, ಬಿ.ಮಹದೇವಯ್ಯ, ಮಂಜುನಾಥ್, ಸೇರಿದಂತೆ ನಾನಾ ಶಾಲೆಗಳ ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಯುವಕರು ಭಾಗವಹಿಸಿದ್ದರು.
ಬಾಲಕಿಯರ ಕಬಡ್ಡಿಯಲ್ಲಿ ತಾಲ್ಲೂಕಿನ ಬಾಗಳಿ ಗ್ರಾಮದ ವಿದ್ಯಾರ್ಥಿಗಳು ಪ್ರಥಮಸ್ಥಾನ ಪಡೆದರು.
ಚಾಮರಾಜನಗರ ಹೌಸಿಂಗ್‍ಬೋರ್ಡ್ ಕಾಲೋನಿಯ ವಿದ್ಯಾರ್ಥಿಗಳು ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದರು.