ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗ: ಮಹಮ್ಮದಗೌಸ ಹವಾಲ್ದಾರ

ಕೊಲ್ಹಾರ:ಮೇ.15: ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಕ್ರೀಡಾಕೂಟಗಳು ಅತಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ನ್ಯಾಯವಾದಿ ಮೊಹಮ್ಮದಗೌಸ್ ಹವಾಲ್ದಾರ ಹೇಳಿದರು.
ಕೊಲ್ಹಾರ ಸಮೀಪದ ಗೊಳಸಂಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗೊಳಸಂಗಿ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು ಕ್ರೀಡೆಗಳು ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಿ ಆರೋಗ್ಯಕರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ ಎಂದರು.
ಕ್ರೀಡಾ ಹಂತದಲ್ಲಿ ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಕ್ರೀಡಾ ಮನೋಭಾವ ಅಳವಡಿಸಿಕೊಂಡು ಮುನ್ನಡೆದು ಇತರರಿಗೆ ಮಾದರಿಯಾಗಿ ಮುನ್ನಡೆಯಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಜಮುಲ್ ಖಾದ್ರಿ ಜಹಗಿರದಾರ, ಗ್ರಾ. ಪಂ ಅಧ್ಯಕ್ಷ ಕೇಶವ ಪವಾರ, ಮಹೇಬೂಬ ಹತ್ತರಕಿಹಾಳ, ಅರವಿಂದ ಕೊಪ್ಪದ, ಮುಜಮ್ಮಿಲ್ ಕಾಚಾಪುರ, ದಾದಾಪೀರ ಶೇಖ, ಅಮೃತ ಯಾದವ, ಅಮರೇಶಗೌಡ ಪಾಟೀಲ, ಅಬುಬಕರ್ ಬಿಜಾಪುರ, ಅಬ್ದುಲ್ ಬಿಜಾಪುರ ಹಾಗೂ ಇತರರು ಇದ್ದರು.