ಕ್ರೀಡೆಗಳಿಂದ ಲಿಂಗ ತಾರತಮ್ಯ ನಿವಾರಣೆ

ಬೆಂಗಳೂರು,ಮಾ.೧೨-ಕ್ರೀಡೆಗಳು ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆಯನ್ನು ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿವೆ ಎಂದು ಭಾರತೀಯ ಮಹಿಳೆಯರ ಕ್ರಿಕೆಟ್ ತಂಡದ ಮ್ಯಾನೇಜರ್ ರಾಚೆಲ್ ಶೆಟ್ಟಿ ಅವರು ತಿಳಿಸಿದ್ದಾರೆ.
ಯಲಹಂಕದ ಆದಿತ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಭಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಕ್ರಿಕೆಟ್ ಆಪರೇಷನ್ಸ್ ಆಡಳಿತ ವಿಭಾಗದ ಮುಖ್ಯಸ್ಥರೂ ಆಗಿರುವ ರಾಚೆಲ್ ಶೆಟ್ಟಿ ಕ್ರೀಡೆಗಳಿಂದ ಶಿಸ್ತು,ಸಂಯಮ ಹೆಚ್ಚಲಿದೆ ಎಂದರು.
ಶಾಲಾ ಹಂತದಿಂದ ಹಿಡಿದು ಪದವಿಯವರೆಗೆ ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿನಿಯರು ಕ್ರೀಡೆಗಳಲ್ಲಿ ತೊಡಗಿದರೆ ಮಾನಸಿಕ ಸ್ಥಿರತೆ ಏಕಾಗ್ರತೆ ಕಂಡುಕೊಳ್ಳಬಹುದು ಎಂದು ೧೯ ಹೇಳಿದರು.
ಮಹಿಳೆಯರು ನಿರಂತರ ಕಲಿಕೆಯಲ್ಲಿ ತೊಡಗಬೇಕು,ಕ್ರೀಡೆಯಲ್ಲಿ ಕೂಡ ಅವರ ಜ್ಞಾನ ಹೆಚ್ಚಬೇಕು ಮನೆಯಲ್ಲಿ ಮಕ್ಕಳಿಗೆ ಕ್ರೀಡೆಗಳಲ್ಲಿ ತೊಡಗಲು ಪ್ರೋತ್ಸಾಹ ನೀಡಿ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದಿತ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಎ.ವಿಶ್ವನಾಥ್ ಅವರು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಗಮನಾರ್ಹ ಸಾಧನೆ ಮಾಡುತ್ತಿದ್ದು ದೇಶದ ಪ್ರಗತಿಗೆ ಅನನ್ಯ ಸೇವೆ ನೀಡುತ್ತಿದ್ದಾರೆ ಎಂದು ಹೇಳಿದರು.
ಮಹಿಳೆಯು ತಾಯಿಯಾಗಿ ಸಂಸಾರದ ಕಣ್ಣಾಗಿ ಇಡೀ ಕುಟುಂಬವನ್ನು ನಿಭಾಯಿಸಲು ಪಡುವ ಶ್ರಮ ಅಷ್ಟಿಷ್ಟಲ್ಲ ಮಹಿಳೆಯರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಡಾ.ಶೋಭಾ ರಾಣಿ ಸೇರಿದಂತೆ ಫಾರ್ಮಸಿ, ನರ್ಸಿಂಗ್, ಮ್ಯಾನೇಜ್‌ಮೆಂಟ್, ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ವಿಭಾಗದ ಎಲ್ಲಾ ವಿಭಾಗದ ಮುಖ್ಯಸ್ಥರು, ಭಾಗವಹಿಸಿದ್ದರು.