ಕ್ರೀಡೆಗಳಿಂದ ಮಾನಸಿಕ, ದೈಹಿಕ ಸಾಮರ್ಥ್ಯ ಹೆಚ್ಚಳ

ಸಿರವಾರ,ಮಾ.೧೪- ಒಂದೇ ಕಡೆ ಕುಳಿತು ಹರಟೆ ಹೊಡೆಯುವ ಬದಲು ಯುವಕರು ಕ್ರೀಡೆಗಳಲ್ಲಿ ತೊಡಗಿಕೊಂಡಾಗ ಮಾನಸಿಕವಾಗಿ, ದೈಹಿಕವಾಗಿ ಸದೃಡ್ಢರಾಗುತ್ತಿರಿ, ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಹೊರತು ಸೋಲು ಗೆಲುವನ್ನು ನೋಡಬಾರದು ಎಂದು ಜೆಡಿಎಸ್ ಯುವ ಮುಖಂಡ ಹಾಗೂ ಶಾಸಕರ ಸಹೋದರ ರಾಜಾ ಆದರ್ಶನಾಯಕ ಹೇಳಿದರು.
ತಾಲೂಕಿನ ಮಲ್ಲಟ ಗ್ರಾಮದಲ್ಲಿ ಮಲ್ಲಟ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ ( ೩ನೇ ಆವೃತ್ತಿ) ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕಾರರು ಕ್ರೀಡಾಸ್ಪೂರ್ತಿಯಿಂದ ಆಡುವ ಮೂಲಕ ಉತ್ತಮ ಆಟಗಾರರಾಗಿ, ಸೋಲು- ಗೆಲುವು ಸಹಜ, ನೀವು ಆಟದಲ್ಲಿ ಭಾಗವಹಿಸುವುದು ಮುಖ್ಯ. ವ್ಯಕ್ತಿಯ ಮಾನಸಿಕ, ದೈಹಿಕ ಸದೃಢತೆಗೆ ಮತ್ತು ಆರೋಗ್ಯ ವೃದ್ದಿಗಾಗಿ ಕ್ರೀಡೆಗಳು ಅತ್ಯಂತ ಅವಶ್ಯಕವಾಗಿವೆ.
ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕ್ರೀಡಾಭಿಮಾನಿಗಳು ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು. ಶಾಸಕರು ಕ್ರೀಡಾಕಾರರಿಗೆ ಪ್ರೋತ್ಸಾಹಿಸುವುದಕ್ಕಾಗಿ ಪ್ರಥಮ ಬಹುಮಾನ ೫೦.೦೦೦ ನಗದು ಮತ್ತು ಟ್ರೊಫಿ ನೀಡಿದ್ದಾರೆ. ಅದೇ ರೀತಿ ಜೆಡಿಎಸ್ ಹಿರಿಯ ಮುಖಂಡರು ಹಾಗೂ ವಾಣಿಜ್ಯ ಉದ್ಯಮಿ ಜಿ. ಲೊಕರೆಡ್ಡಿಯವರು ದ್ವಿತೀಯ ಬಹುಮಾನ ೨೫.೦೦೦ ಸಾವಿರ ನಗದು ನೀಡುವ ಮೂಲಕ ಪ್ರೋತ್ಸಾಹಿಸಿದ್ದಾರೆ.
ಈ ಸಂದರ್ಭದಲ್ಲಿ ದೇವರಾದ ನಾಯಕ ಗುತ್ತಿಗೆದಾರರು, ಮಹಾಂತೇಶ ಸ್ವಾಮಿ ಮಲ್ಲಟ, ರಾಜೇಶಗೌಡ, ಯಲ್ಲಪ್ಪ ದೊರೆ, ಜಮ್ಸ್ ಅತ್ತನೂರು, ಆಂಜಿನೇಯ್ಯ ನಾಯಕ್, ಬಸವರಾಜ ನಾಯಕ, ರವಿಕುಮಾರ ಛಲವಾದಿ, ಶಿವಕುಮಾರ, ಪೂಜಪ್ಪ, ಮಹಾದೇವ ದೊರೆ, ರಾಘವೇಂದ್ರ ನಾಯಕ, ವೆಂಕಟೇಶ ನಾಯಕ, ಸಣ್ಣ ಮಾರೇಪ್ಪ ಉಪಸ್ಥಿತರಿದ್ದರು.