ಕ್ರೀಡೆಗಳಿಂದ ದೈಹಿಕ, ಮಾನಸಿಕ ಸಾಮಥ್ರ್ಯ ಹೆಚ್ಚಳ

ಕಲಬುರಗಿ,ಸೆ.26-ಕ್ರೀಡೆಗಳು ಮನುಷ್ಯನ ಮಾನಸಿಕ ಮತ್ತು ದೈಹಿಕ ಸಾಮಥ್ರ್ಯವನ್ನು ಸದೃಢಗೊಳಿಸುತ್ತವೆ. ಸದೃಢ ಭಾರತಕ್ಕಾಗಿ ಆರೋಗ್ಯವಂತ ಯುವಕರ ಅವಶ್ಯಕತೆಯಿದೆ. ಅದಕ್ಕಾಗಿ ಕ್ರೀಡೆಯಲ್ಲಿ ಸ್ಪೂರ್ತಿ ಮತ್ತು ಉತ್ಸಾಹದಿಂದ ಕ್ರೀಡಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಮತ್ತು ಬಹುಮಾನ ಪಡೆದು ರಾಷ್ಟ್ರಕ್ಕೆ ಕೀರ್ತಿ ತರುವಂತ ರಾಗಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿÀ ಜಿ. ಗಾಯತ್ರಿ ಹೇಳಿದರು.
ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ 2023-24ನೇ ಸಾಲಿನ ಜಿಲ್ಲಾಮಟ್ಟದ ಸಾಲಿನ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ್ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಕ್ರೀಡಾ ವಿದ್ಯಾರ್ಥಿಯು ನ್ಯಾಯ ಸಮ್ಮತವಾಗಿ ಆಟವಾಡಬೇಕು.ಯಾವುದೇ ತಂಟೆ ತಕರಾರುಗಳಿಗೆ ಆಸ್ಪದ ನೀಡಬಾರದು. ಕ್ರೀಡಾ ಸ್ಪರ್ಧೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಉನ್ನತ ಬಹುಮಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಬೇಕೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಂಘದ ಅಧ್ಯಕ್ಷÀ ಅರುಣ್ ಕುಮಾರ್ ಪಾಟೀಲ್,ಎನ್‍ಎಸ್‍ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ್ ದೊಡ್ಡಮನಿ, ಪ್ರಾಚಾರ್ಯರುಗಳಾದ ಶಿವಾನಂದ್ ಖಜೂರಿ, ಪ್ರಹ್ಲಾದ ಬುರ್ಲಿ, ಸುಜಾತ ಎಂ,ಆಯಿಷಾ ನಸೀಮ್, ಬಸವರಾಜ್ ಬಿರಾಜದಾರ್, ಗೌಸುದ್ದೀನ್, ತುಮಕೂರಕರ, ಕಲ್ಯಾಣ ಕರ್ನಾಟಕ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಮಾಲಿಪಾಟೀಲ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಜೆ.ಮಲ್ಲಪ್ಪ ಉಪನ್ಯಾಸಕರುಗಳಾದ ಮಲ್ಕನಗೌಡ ಪಾಟೀಲ್, ಶಾಂತಗೌಡ ಪಾಟೀಲ್, ಅಲ್ಲಾ ಪಟೇಲ್, ರಂಗಸ್ವಾಮಿ,ದೇವಿದಾಸ್ ಪವಾರ್, ಮಾಪಣ್ಣ ಜಿರೋಳಿ, ಮಲ್ಲಯ್ಯ ಮಠಪತಿ, ಶಿವಕುಮಾರ್ ಸಜ್ಜನ್, ಕಾಶಿನಾಥ್ ಮುಖರ್ಜಿ, ಜಟ್ಟಿಂಗರಾಯ ಶಾಖಾಪುರ್, ಜಗನ್ನಾಥ್ ಹೊಸಮನಿ, ಭಾರತೀಶ್, ಶರಣಗೌಡ ಪಾಟೀಲ್, ವಿಜಯಕುಮಾರ್ ರೋಣದ, ದೇವಿದಾಸ ಪವಾರ್, ಶ್ರೀದೇವಿ ಬಾವಿ ದೊಡ್ಡಿ, ಶಿಲ್ವಿ ದೇಶಮಾನೆ, ಶುಭೋದಿನಿ ಮುಂತಾದವರು ಉಪಸ್ಥಿತರಿದ್ದರು.
ಭೀಮಾಶಂಕರ್ ಮಠಪತಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಭೀಮರಾಯ ಅರಿಕೇರಿ ಸ್ವಾಗತಿಸಿದರು. ಮಲ್ಕನಗೌಡ ಪಾಟೀಲ್ ನಿರೂಪಿಸಿದರು.