ಕ್ರೀಡೆಗಳಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವಿಕರಿಸಲು ಕರೆ

ಸಂಜೆವಾಣಿ ವಾರ್ತೆಸಂಡೂರು:ಅ: 10:  ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗಳು ಅತಿ ಮುಖ್ಯವಾದ ಭಾಗವಾಗಿದೆ, ಸಶಕ್ತ ದೇಹವಿದ್ದಲ್ಲಿ ಸಶಕ್ತ ಮನಸ್ಸು ಇರುತ್ತದೆ ಎನ್ನುವಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಬೇಕು, ಸೋಲು ಗೆಲುವು ನಂತರ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕೆ. ತಿಳಿಸಿದರು.ಅವರು ಪಟ್ಟಣದ ಸಂಡೂರು ವಸತಿ ಶಾಲೆ ಅವರಣದಲ್ಲಿ ಲಕ್ಷ್ಮೀಪುರ ಕ್ಲಸ್ಟರ್‍ನ 15 ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಕ್ರೀಡೆಯಲ್ಲಿ ಭಾಗಿಯಾಗುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬೇಕು, ಕ್ರೀಡಾನಿಯಮಗಳನ್ನು ಪಾಲಿಸುವ ಮೂಲಕ ಸೋಲುಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಅಗ ನಿಜವಾದ ಕ್ರೀಡಾಪಟು ಹೊರಹೊಮ್ಮಲು ಸಾಧ್ಯ, ಇಂದು ನೀವು ನಡೆಸಿದ ತಯಾರಿಯ ಪ್ರದರ್ಶನವಾಗುತ್ತದೆ, ಅಲ್ಲದೆ ಮುಂದಿನ ಹಂತಕ್ಕೆ ಹೋಗಲು ಸಹಕಾರಿಯಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಸಂಡೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಗದೀಶ್ ಬಸಾಪುರ, ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಕಾರ್ಯದರ್ಶಿ ಜಿ.ಎಸ್. ಸೋಮಪ್ಪ, ಸಿ.ಅರ್.ಪಿಗಳಾದ ಮಂಜುಶ್ರೀ, ಪರಶುರಾಮಪ್ಪ ಚೌಗಳಿ, ದೈಹಿಕ ಶಿಕ್ಷಕರು, 15 ಸರ್ಕಾರಿ, ಖಾಸಗಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.