ಕ್ರೀಡೆಗಳಲ್ಲಿ ಭಾಗವಹಿಸಲು ಸಲಹೆ

ಕೋಲಾರ,ಏ.೨೦:ಪ್ರತಿಯೊಬ್ಬ ಕ್ರೀಡಾಪಟು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸೌಹಾರ್ದತೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಹೇಳಿದರು.
ತಾಲೂಕಿನ ವಿಟ್ಟಪನಹಳ್ಳಿ ಗ್ರಾಮದಲ್ಲಿ ಮಾಸ್ಟರ್-ಬ್ಲಾಸ್ಟರ್ ಕ್ರಿಕೇಟರ್ಸ್ ವಿಟ್ಟಪ್ಪನಹಳ್ಳಿ ಇವರ ವತಿಯಿಂದ ನಡೆದ ಗ್ರಾಮಾಂತರ ವಿಕ್ಕಿಬಾಲ್ ಟೂರ್ನಿಮೆಂಟ್ ಹಾಗೂ ಪ್ರಥಮ ಬಾರಿಗೆ ಶ್ರೀ ಮಾರಿಕಾಂಭ ಕ್ರಿಕೇಟರ್ಸ್ ವಿಟ್ಟಪ್ಪನಹಳ್ಳಿ ಇವರ ವತಿಯಿಂದ ನಡೆದ ಹುತ್ತೂರು ಪಂಚಾಯತಿ ಪ್ರೀಮಿಯರ್ ಕ್ರಿಕೇಟ್ ಲೀಗ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದಲ್ಲಿ ೩ ತಿಂಗಳಿಗೊಮ್ಮೆ ಕ್ರಿಕೇಟ್ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದಲ್ಲಿರುವ ಉತ್ತಮ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸವಾಗುವುದರ ಜೊತೆಗೆ ಪ್ರತಿಭೆಗಳು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಲಿ ಎಂದು ಆಶಿಸಿದರು.
ಗ್ರಾಮಾಂತರ ವಿಕ್ಕಿ ಬಾಲ್ ಟೂನಿರ್ಯ ನಂದಿನಿ ಪ್ರವೀಣ್ ರವರ ಕೊಡುಗೆಯ ಪ್ರಥಮ ಬಹುಮಾನ ಚಿಟ್ನಹಳ್ಳಿ ತಂಡ, ಕೋಟೆ ನಾರಾಯಣಸ್ವಾಮಿ ಕೊಡಿಗೆಯ ದ್ವಿತೀಯ ಬಹುಮಾನ ವಿಟ್ಟಪನಹಳ್ಳಿ ತಂಡ, ವಿ.ಎಸ್ ವಿಶ್ವನಾಥ ಕೊಡುಗೆಯ ತೃತೀಯ ಬಹುಮಾನ ಶಿಳ್ಳಂಗೆರೆ ತಂಡಗಳು ಪಡೆದುಕೊಂಡವು.
ಹುತ್ತೂರು ಪ್ರೀಮಿಯರ್ ಲೀಗ್ ೨೦೨೧ರ ಡಿ.ವಿ ಹರೀಶ್ ಕೊಡುಗೆಯ ಪ್ರಥಮ ಬಹುಮಾನ ಹನುಮಾನ್ ವಾರಿಯರ್ಸ್, ವಕೀಲ ವಿ. ಶ್ರೀನಿವಾಸ್ ಕೊಡುಗೆಯ ದ್ವಿತೀಯ ಬಹುಮಾನ ರಾಯಲ್ ಕಿಂಗ್ಸ್, ಕದಿರಿರೆಡ್ಡಿ ಪ್ರಾಯೋಜಕತ್ವದ ತೃತೀಯ ಬಹುಮಾನ ವಿರಾಟ್ ಬಾಯ್ಸ್ ತಂಡಗಳು ಪಡೆದಕೊಂಡಿವೆ.
ಕಾರ್ಯಕ್ರಮದಲ್ಲಿ ಹುತ್ತೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೋಟೆ ನಾರಾಯಣಸ್ವಾಮಿ, ಹುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಆರ್. ಮಂಜುನಾಥ್, ವಿ.ಕೃಷ್ಣಪ್ಪ, ಎಂ.ಶ್ರೀನಿವಾಸ, ವಿ.ಎಸ್ ವಿಶ್ವನಾಥ್, ಚಿಕ್ಕಪ್ಪಯ್ಯ, ಸುನೀಲ್ ಸಿ.ಎಂ, ವಿ.ಇ ಶ್ರೀನಿವಾಸ್, ಟಿ.ಹನುಮಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಯಾನಾದಹಳ್ಳಿ ವೆಂಕಟೇಶಪ್ಪ, ತಂಬಿಹಳ್ಳಿ ಆನಂದ್, ಕೋನಪ್ಪ, ಸುಬ್ಬಣ್ಣ, ಅಬ್ಬಣಿ ಸಂಪತ್, ನಾಗರಾಜ್, ಶಿಕ್ಷಕ ಎಂ.ಮಂಜುನಾಥ್, ಶಂಕರ್, ಮನೋಹರ್, ಅನಿಲ್, ರಾಜೇಶ್, ಎನ್.ಶಿವಕುಮಾರ್, ಲೋಕೇಶ್ ಲೋಕಿ, ಸೋಮು, ಸುನೀಲ್, ಪುನೀತ್, ಬೈರಾ, ಹರೀಶ್, ಮುರಳಿ, ಯಾನಾದಹಳ್ಳಿ ಅನಿಲ್ ಕುಂಬ್ಲೆ, ಮಧು, ಕಿಶೋರ್, ಮಂಜು, ಸಂತೋಷ್, ಶ್ರಿಕಾಂತ್ ಜಿಂಕೆ ಹರೀಶ್, ನಿತೀಶ್ ಉಪಸ್ಥಿತರಿದ್ದರು.