ಕ್ರೀಡೆಗಳನ್ನು ಉಳಿಸಿ ಬೆಳೆಸಿರಿ; ಹಂಪಿಹೊಳಿ


ಬಾದಾಮಿ,ಜೂ.18: ಇಂದು ಕ್ರೀಡೆಗಳು ನಶಿಸಿ ಹೋಗುತ್ತಿದ್ದು, ಯುವ ಜನಾಂಗ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಚೊಳಚಗುಡ್ಡ ಗ್ರಾಮದ ಮುಖಂಡ ಬಸವರಾಜ ಹಂಪಿಹೊಳಿ ಹೇಳಿದರು.
ಅವರು ಸಮೀಪದ ಬನಶಂಕರಿಯಲ್ಲಿ ಶ್ರೀ ಬನಶಂಕರಿ ಕ್ರಿಕೆಟ್ ಕ್ಲಬ್ ಬನಶಂಕರಿ ಮುಕ್ತ ಹಾರ್ಡ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ನ್ನು ಜ್ಯೋತಿ ಬೆಳಗಿಸಿ ಮಾತನಾಡಿದರು. ಶಿಕ್ಷಕ ಆರ್.ಎಸ್.ಪೂಜಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಕಾಂತ ಪೂಜಾರ ಕ್ರಿಕೆಟ್ ಟೂರ್ನಾಮೆಂಟನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉದಯ, ಮಾಲತೇಶ, ಕುಬೇರಗೌಡ್ರ, ಕಿರಣ, ಪ್ರಕಾಶ,ಅಶೋಕ, ವಿರೇಶ, ಕುಮಾರ, ಶೇಖರ, ಮಾರುತಿ, ಅರುಣಗೌಡ್ರ, ಹೊನಕೇರಿ, ಮೌನೇಶ ಪುತ್ರಪ್ಪ ಸೇರಿದಂತೆ ಇತರರು ಹಾಜರಿದ್ದರು.