ಕ್ರೀಡೆಗಳನ್ನು ಆಡುವುದರಿಂದ ದೇಹ ಸದೃಡವಾಗಲು ಸಹಕಾರಿ

ಬೆಟ್ಟದಪುರ: ಜು.20:- ಸ್ಫೂರ್ತಿಯುತ ಕ್ರೀಡಾಮನೋಭಾವದಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳಸಬಹುದು ಎಂದು ಪಿರಿಯಾಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ತಿಳಿಸಿದರು.
ಬೆಟ್ಟದಪುರದ ಚಾಣಕ್ಯ ವಿದ್ಯಾಸಂಸ್ಥೆಯ ಆಯೋಜನೆಯಲ್ಲಿ ನಡೆದ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ನಡುವೆ ಪರಸ್ಪರ ಸಾಮರಸ್ಯವಿದ್ದರೆ ಮತ್ತು ಸ್ಫೂರ್ತಿದಾಯಕವಾಗಿ ಆಟವಾಡಿದರೆ ಎಲ್ಲ ವಿದ್ಯಾರ್ಥಿಗಳಲ್ಲೂ ನಾಯಕತ್ವದ ಗುಣ ಬೆಳೆಯಬಹುದು. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿ ಪೆÇೀಷಕರಿಗೆ ಮತ್ತು ಶಾಲೆಗೆ ಕೀರ್ತಿ ತರಬಹುದು ಎಂದರು.
ಕೋವಿಡ್ ಸಮಸ್ಯೆಯಿಂದಾಗಿ 2- 3ವರ್ಷಗಳಿಂದ ಯಾವುದೇ ಕ್ರೀಡೆಗಳನ್ನು ಆಯೋಜಿಸಿರಲಿಲ್ಲ,ಕರೊನ ಸಮಸ್ಯೆ ಈಗ ಸ್ವಲ್ಪ ಕಡಿಮೆಯಾಗಿದ್ದು ಕ್ರೀಡಾಕೂಟ ವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ, ವರುಣನ ಆಗಮನದಿಂದ ಸ್ವಲ್ಪ ಬೇಸರವಾಗಿದ್ದರೂ,ವಿದ್ಯಾರ್ಥಿಗಳ ಉತ್ಸಾಹ ನೋಡಿ ತುಂಬಾ ಖುಷಿಯಾಗಿದೆ ಎಂದರು.ಕ್ರೀಡೆಗಳನ್ನು ಆಡುವುದರಿಂದ ವಿದ್ಯಾರ್ಥಿಗಳಿಗೆ ದೇಹವು ಸದೃಡವಾಗಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಶಿವಯ್ಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ಇ.ಅ.ಔ. ಸತೀಶ್, ಚಾಣಕ್ಯ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಜಯಣ್ಣ ,ನಿರ್ದೇಶಕರಾದ ಯದುರಾಜ್ ಹರೀಶ್, ದೈಹಿಕ ಶಿಕ್ಷಕ ರಘುಪತಿ, ಚಾಣಕ್ಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಿಮ್ಮಯ್ಯ ಊಏ, ಹಿರಿಯ ಶಿಕ್ಷಕಿ ಕುಮಾರಿ ಸಿ.ಎಚ್ ಹಾಗೂ ಎಲ್ಲ ಶಾಲೆಯ ದೈಹಿಕ ಶಿಕ್ಷಕರು ಮತ್ತು ಚಾಣಕ್ಯ ಶಾಲೆಯ ಸಹ ಶಿಕ್ಷಕರು ಸಿಬ್ಬಂದಿವರ್ಗ ಹಾಜರಿದ್ದರು.