ಕ್ರೀಡಾ ಸ್ಫೂರ್ತಿ ಮೆರೆಯಲು ಯುವಕರಿಗೆ ಕರೆ

ಸಿಂದಗಿ;ಜ.4: ಇಂದಿನ ತಂತ್ರಜ್ಞಾನ ಯುಗದಲ್ಲಿ ಕ್ರೀಡೆಗಳು ಮರೆಯಾಗುತ್ತಿದ್ದು ಯುವಕರಿಗೆ ಕ್ರೀಡಾ ಸ್ಪೂರ್ತಿ ಮೇರೆಯಲು ಇಂತಹ ಟೊರ್ನೋಮೆಂಟ ಸಾಕ್ಷಿಯಾಗುತ್ತವೆ ಎಂದು ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ರಾಜಶೇಖರ ಚೌರ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಾಬಾಸಾಹೇಬ ಅಂಬೇಡ್ಕರ ವೃತ್ತದಲ್ಲಿ 203 ನೇ ಭೀಮಾ ಕೋರೆಗಾಂವ ವಿಜಯೋತ್ಸವದ ಅಂಗವಾಗಿ ದಲಿತ ಸೇನೆ ಮತ್ತು ಭೀಮಬಾಯ್ಸ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಅಂಡರ್ 19 ಕ್ರಿಕೇಟ ಟೊರ್ನೋಮೆಂಟ ಹಾಗೂ ಭೀಮಾ ಕೋರೆಗಾಂವ ವಿಜಯೋತ್ಸವದ ಅಂಗವಾಗಿ ಕೇಕ್ ಕತ್ತರಿಸಿ ಯುವ ಆಟಗಾರರಿಗೆ ಸಿಹಿ ಹಂಚಿ ಮಾತನಾಡಿ, ಟೊರ್ನೋಮೆಂಟ್ ನಡೆಯಬೇಕಾದರೆ ಪ್ರೋತ್ಸಾಹಿಸುವ ಮನಸ್ಸುಳ್ಳ ಮಹಾ ದಾನಿಗಳು ಮುಂದೆ ಬಂದು ಸಹಾಯಹಸ್ತ ಚಾಚಿದ ಪ್ರತ್ಯಕ್ಷ ಮತ್ತು ಪರೋಕ್ಷ ಧಾನಿಗಳಿಗೂ ಮತ್ತು ಟೊರ್ನೋಮೆಂಟನಲ್ಲಿ ಪಾಲ್ಗೊಂಡ ಎಲ್ಲ ಆಟಗಾರಿಗೂ ಕೋರೆಗಾಂವ ವಿಜಯೋತ್ಸವದ ಹಾರ್ದಿಕ ಶುಭಾಶಯಗಳನ್ನು ತಿಳಿಸುವುದರ ಮೂಲಕ ಅಭಿನಂದಿಸಿದರು.
ಪೈನಲ್ ಪಂದ್ಯದಲ್ಲಿ ಸಿಂದಗಿಯ ನೂತನ ಪುರಸಭೆಯ ಅಧ್ಯಕ್ಷ ಶಾಂತವೀರ ಮನಗೂಳಿ ನೀಡಿದ ಪ್ರಥಮ ಬಹುಮಾನ 21000 ರೂ ಎಮ.ಎಸ.ಡಿ ಪ್ಯಾನ್ಸ ಗೆದ್ದುಕೊಂಡಿತು. ದ್ವೀತಿಯ ಬಹುಮಾನ 11111 ರೂಗಳನ್ನು ಪುರಸಭೆಯ ಸದಸ್ಯರಾದ ಭೀಮಾ ಕಲಾಲ ಅವರು ನೀಡಿದ ಬಹುಮಾನವನ್ನು ಭೀಮಬಾಯ್ಸ ತಂಡ ಮುಡಿಗೇರಿಸಿಕೊಂಡಿತು,