ಕ್ರೀಡಾ ಮನೋಭಾವ ಮೂಡಿಸಿಕೊಳ್ಳಿ:ಆನಂದರಾಜಪ್ರಭು

(ಸಂಜೆವಾಣಿ ವಾರ್ತೆ)
ಹುಮನಾಬಾದ್ :ಆ.7:ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದಢವಾಗಿರುತ್ತದೆ. ಸೋಲು -ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಶ್ರೀ ಮಾಣಿಕಪ್ರಭು ಸಂಸ್ಥಾನ ಪ್ರಧಾನ ಕಾರ್ಯದರ್ಶಿ ಆನಂದರಾಜಪ್ರಭುಗಳು ಹೇಳಿದರು.
ತಾಲ್ಲೂಕಿನ ಮಾಣಿಕನಗರ ಗ್ರಾಮದ ಹೊರವಲಯದ ಸಿದ್ಧರಾಜ ಕ್ರಿಕೆಟ್ ಗ್ರೌಂಡದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ದಿಂದ ಆಯೋಜಿಸಿದ ಅಂತರ ಉಪ-ವಿಭಾಗ ಕ್ರಿಕೆಟ್ ಪಂದ್ಯಾವಳಿ ದ್ವೀಪ ಬೆಳಗಿಸಿ ಗಂಟೆ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು. ಇಂತಹ ಕ್ರೀಡೆಗಳನ್ನು ಆಯೋಜಿಸುವುದರಿಂದ ಯುವ ಕ್ರೀಡಾ ಪಟುಗಳಲ್ಲಿ ದೈಹಿಕ ಹಾಗು ಮಾನಸಿಕ ಆರೋಗ್ಯ ಅತ್ಯಂತ ಉತ್ಕøಷ್ಟವಾಗಿರುತ್ತದೆ. ಯಾರು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರುತ್ತಾರೋ ತಮ್ಮ ಜೀವನದ ಎಲ್ಲಾ ಕಾರ್ಯಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಾರೆ. ಹಾಗು ಕ್ರೀಡಗಳಿಂದ ಪರಸ್ಪರ ಪ್ರೀತಿ ಪ್ರೇಮ ಹಾಗೂ ಸೌಹಾರ್ದತೆಯಿಂದ ಬಾಳಲು ಸಹಕಾರಿಯಾಗುತ್ತದೆ.
ಕಾರ್ಯನಿರ್ವಾಹಕ ಅಭಿಯಂತರರಾದ ಶಂಕರ ಅಡಕಿ ಮಾತನಾಡಿ. ಯುವಕರು ದುಶ್ಚಟಕ್ಕೆ ಬಲಿಯಾಗದೇ ಉತ್ತಮ ಹವ್ಯಾಸ ಜತೆಗೆ ಕ್ರೀಡೆಗಳ ಕಡೆಗೆ ಹೆಚ್ಚು ಗಮನ ಹರಿಸುವುದು ಅವಶ್ಯಕವಾಗಿದೆ ಯುವಕರು ದೇಶದ ನಿಜವಾದ ಸಂಪತ್ತು. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಕೊನೆಯಲ್ಲಿ ಕ್ರೀಡ ಎಂದಮೇಲೆ ಸೋಲು ಗೆಲುವು ನಿಶ್ಚಿತ, ಹಂಪ್ರರ್ಗಳ ತೀರ್ಮಾನಕ್ಕೆ ಗೌರವ ನೀಡಿ ಶಾಂತಿಯನ್ನು ಕ್ರೀಡಾ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕು ಎಂದು ಮನವರಿಕೆ ಮಾಡಿಕೊಂಡರು.
ಎ.ಇ.ಇ ಸಂತೋಷ ಮಟ್ಟಿ, ಗುರುಶಾಂತ ವಾರದ, ರಾಹುಲ ಇಜಾರೆ, ಸೂರ್ಯಕಾಂತ ಪಾಟೀಲ್, ವಿರೇಶ, ಕೇಂದ್ರ ಕಾರ್ಯಕಾರಣಿ ಸಮಿತಿ ಸದಸ್ಯ ಹಾಗೂ ಸಹಾಯಕ ಇಂಜಿನಿಯರ ಅರವಿಂದ ಧುಮಾಳೆ,,659 ಅಧ್ಯಕ್ಷ ರವಿಕುಮಶರ, ಇಂಬ್ರಾನ, ಗುತ್ತಿಗೆದಾರ ಅಧ್ಯಕ್ಷ ದಯಾನಂದ ಪಾಟೀಲ್, ಪ್ರಕಾಶ ವರ್ಮಾ, ಗಣಪತಿ ಖೇಣೀರ ಸೇರಿದಂತೆ ಅನೇಕರಿದ್ದರು.