ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ: ಡಂಗನವರ

ಹುಬ್ಬಳ್ಳಿ, ಜ21: ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಪ್ರತಿಭೆ ಪ್ರದರ್ಶಿಸುವಂತೆ ಶ್ರೀ ಜ.ಮೂ.ವಿ. ಸಂಘದ ಗೌರವ ನಿರ್ದೇಶಕರಾದ ಸದಾನಂದ ಡಂಗನವರ ಕರೆ ನೀಡಿದರು.
ಶ್ರೀ ಜ.ಮೂ.ವಿ. ಸಂಘದ ಪ.ಪೂ. ಕಾಲೇಜ್ ಆಶ್ರಯದಲ್ಲಿ ನಡೆದ ಡಾ. ಮೂಜಗಂ ಟ್ರೋಫಿ-2023 ಆಯೋಜಿತ ತಾಲೂಕಾ ಮಟ್ಟದ ಬಾಲಕರ ಕಬಡ್ಡಿ, ಬಾಲಕಿಯರ ಖೋಖೋ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಲಿಂಗರಾಜ ಇಂಗಳಹಳ್ಳಿ, ಬಿ.ಎಂ. ಸಾಲಿಮಠ, ಮೂರ್ತಿರಾಜ ಹೂಗಾರ ಉಪಸ್ಥಿತರಿದ್ದರು.