ಕ್ರೀಡಾ ಮನೋಭಾವನೆ ಬೆಳಸಿಕೊಳ್ಳುವುದು ಅವಶ್ಯಕ : ಡಾ. ಎನ್. ವಿ ಪ್ರಸಾದ್

ಕಲಬುರಗಿ,ಡಿ.3:ದೈನಂದಿನ ಕೆಲಸದೊತ್ತಡ, ಸಾಮಾಜಿಕ, ವೈಯುಕ್ತಿಕ ಇನ್ನಿತರ ಸಮಸ್ಯೆಗಳನ್ನು ಎದುರಿಸುವ ಪೆÇಲೀಸರಿಗೆ ಇತರಹದ ಕ್ರೀಡಾಕೂಟಗಳು ಮಾನಸಿಕ ನೆಮ್ಮದಿ ಹೆಚ್ಚಿಸಿ ಸಂತೋಷ ಉಂಟು ಮಾಡುತ್ತವೆ. ಹಾಗಾಗಿ ಎಲ್ಲರೂ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳುವುದು ಅವಶ್ಯಕ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ ಪ್ರಸಾದ ಅವರು ಅಭಿಪ್ರಾಯಪಟ್ಟರು.
ಶುಕ್ರವಾರ ಇಲ್ಲಿನ ಪೆÇಲೀಸ್ ಕವಾಯತು ಮೈದಾನದಲ್ಲಿ ಗಾಳಿಯಲ್ಲಿ ಪಾರಿವಾಳ ಹಾಗೂ ಬಲೂನ್ ಹಾರಿಬಿಡುವ ಮೂಲಕ ಮೂರು ದಿನಗಳ ಜಿಲ್ಲಾ ಪೆÇಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೋವಿಡ್ ಸಮಸ್ಯೆಯಿಂದ 2 ವರ್ಷಗಳಿಂದ ಕ್ರೀಡಾಕೂಟವನ್ನು ಸರಿಯಾದ ರೀತಿಯಲ್ಲಿ ಏರ್ಪಡಿಸಲಾಗಿಲ್ಲ. ಈ ವರ್ಷ ನಡೆಯುತ್ತಿರುವ ಸ್ಪರ್ಧೆಯಲ್ಲಿ ಎಲ್ಲರೂ ಭಾಗಿಯಾಗಿರುವುದನ್ನು ಕಂಡು ಸಂತಸವಾಗಿದೆ ಎಂದರು.
ಗಡಿಯಲ್ಲಿ ಸೈನಿಕರು ತಮ್ಮ ಪ್ರಾಣ ಒತ್ತೆಯಿಟ್ಟು ಸೇವೆಗೈದರೆ, ದೇಶದೊಳಗೆ ಪೆÇಲೀಸರು ಅದೇ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕೊಂಡಾಡಿದರು.
ಕಲಬುರಗಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಇಶಾ ಪಂತ್ ಅವರು ಸ್ವಾಗತ ಮಾಡಿ, ಕ್ರೀಡಾಕೂಟದಲ್ಲಿ ಭಾಗಿಯಾಗಿರುವ 6 ತಂಡಗಳಿಗೂ ಶುಭಾಶಯ ಕೋರಿದರು.
ಡಿಎಆರ್, ಶಹಾಬಾದ್, ಚಿಂಚೋಳಿ, ಆಳಂದ, ಕಲಬುರಗಿ ಗ್ರಾಮೀಣ ಹಾಗೂ ಮಹಿಳಾ ಪೆÇಲೀಸ್ ತಂಡಗಳು ಭಾಗವಹಿಸಿದ್ದವು. ಕಮಾಂಡರ್ ಆರ್.ಪಿ.ಐ. ಹಣುಮಂತ ನಾಯ್ಕ ಅವರು ಪರೇಡ್ ಮುನ್ನಡೆಸಿದರು.
ಮೂರು ದಿನಗಳ ಕ್ರೀಡಾಕೂಟದಲ್ಲಿ ವಾಲಿಬಾಲ್, ಕಬಡ್ಡಿ, ಕ್ರಿಕೆಟ್, ಫೈರಿಂಗ್, ಶಾಟ್ ಪುಟ್, ಡಿಸ್ಕಸ್ ಥ್ರೋ, ಲಾಂಗ್ ಜಂಪ್, ಹ್ಶೆಜಂಪ್, 4100 ಮೀಟರ್ ರಿಲೇ, ವೈಯುಕ್ತಿಕ ಹಾಗೂ ಗುಂಪು ಸ್ಪರ್ಧೆಗಳು ಜರುಗಲಿವೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ ಶಶಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಭ್ರμÁ್ಟಚಾರ ನಿU್ಪ್ರಹದಳ (ಎಸಿಬಿ)ಎಸ್.ಪಿ ಮಹೇಶ್ ಮೇಘಣ್ಣನವರ್, ಲೋಕಾಯುಕ್ತ ಎಸ್.ಪಿ. ಸತೀಶ್ ಚಿಟಗುಪ್ಪಿ, ನಿವೃತ್ತ ಪೆÇಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಸವರಾಜ್ ಇಂಗಿನ್ ಸೇರಿದಂತೆ ಪೆÇಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.
ಸುರೇಶ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪ್ರಸನ್ನ ದೇಸಾಯಿ ವಂದಿಸಿದರು.