ಕ್ರೀಡಾ ಪಟುಗಳೊಂದಿಗೆ ಹುಟ್ಟುಹಬ್ಬ ಆಚರಣೆ

ದಾವಣಗೆರೆ ಮಾ. 30: ದಾವಣಗೆರೆ ಮಹಾನಗರ ಪಾಲಿಕೆ 33ನೇ ವಾರ್ಡಿನ ಸದಸ್ಯ ಕೆ ಎಂ ವೀರೇಶ್ ಅವರು ತಮ್ಮ ಹುಟ್ಟುಹಬ್ಬವನ್ನು  ಕ್ರೀಡಾಪಟುಗಳೊಂದಿಗೆ  ಸರಳವಾಗಿ ಆಚರಿಸಿಕೊಂಡರು.ಇಂದು ಬೆಳಿಗ್ಗೆ  ಸ್ಟೇಡಿಯಂಗೆ ಭೇಟಿ ನೀಡಿ ವೇಟ್ ಲಿಫ್ಟಿಂಗ್ ಕ್ರೀಡಾಪಟುಗಳು ಹಾಗೂ ಕುಸ್ತಿ ಕ್ರೀಡಾಪಟುಗಳೊಂದಿಗೆ ವೇಟ್ ಲಿಫ್ಟ್ ಮಾಡುವ ಮೂಲಕ  ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಕೆ ಮಲ್ಲಪ್ಪ ಅವರ ಸವಿ ನೆನಪಿಗಾಗಿ ಕುಸ್ತಿ ಕ್ರೀಡಾ ಪಟುಗಳಿಗೆ  ವೀರೇಶ್ ಅವರು ಬೀರೇಶ್ವರ ವ್ಯಾಯಾಮ ಶಾಲೆ ಆವರಣದಲ್ಲಿ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಿದ್ದರು.ಕ್ರಿಡಾಪಟುಗಳು ವಿರೇಶ ಅವರಿಗೆ ಸಿಹಿ ತಿನ್ನಿಸಿ ಶುಭ ಹಾರೈಸಿದರು.