ಕ್ರೀಡಾ ತರಬೇತುದಾರರ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹ

ಕಲಬುರಗಿ:ಮೇ.21: ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕರ್ನಾಟಕ ಸರ್ಕಾರ ಸೆಮಿ ಲಾಕ್ ಡೌನ್ ಘೋಷಿಸಿದೆ ಇದು ಸ್ವಾಗತಾರ್ಹ ವಿಷಯವಾಗಿದೆ ಎಂದು ಅಂತರಾಷ್ಟ್ರೀಯ ಕರಾಟೆ ಪಟು ಮನೋಹರಕುಮಾರ ಬೀರನೂರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ನಾವು ಕೂಡ ಸೆಮಿ ಲಾಕ್ ಡೌನ್ ಅನ್ನು ಪ್ರೋತ್ಸಾಹಿಸುತ್ತೇವೆ.ಆದರೆ ಕೆಲವು ವೃತ್ತಿಗಳನ್ನು ಮಾಡಿಕೊಂಡು ಬಂದಿರುವ ಕೆಲ ಕುಟುಂಬಗಳು ಇದರಿಂದಾಗಿ ಬೇಸತ್ತು ಹೋಗಿವೆ.ಈಗಾಗಲೇ ಬೀದಿ ಬದಿ ವ್ಯಾಪಾರಿಗಳು , ಕೂಲಿಕಾರ್ಮಿಕರು, ಕಲಾವಿದರು ಹಾಗೂ ಕಟ್ಟಡ ಕಾರ್ಮಿಕರಿಗೆ ಪರಿಹಾರ ಘೋಷಣೆ ಮಾಡಿದ್ದೀರಿ ಆದರೆ ಕರಾಟೆ ಹಾಗೂ ಕೆಲವು ಕ್ರೀಡಾ ತರಬೇತುದಾರರಿಗೆ ಏಕೆ ಘೋಷಣೆ ಮಾಡಿಲ್ಲ ? ಎಂಬುದು ಅವರು ಪ್ರಶ್ನಿಸಿದರು. ಹೀಗಾಗಿ ಇದರಿಂದ ಅವರ ಕುಟುಂಬವು ಆರ್ಥಿಕ ಪರಿಸ್ಥಿತಿ ಕಂಗಲಾಗಿದ್ದಾರೆ ಎಂದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತಾಗಿ ಕ್ರೀಡಾ ತರಬೇತುದಾರರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.ಕೂಡಲೇ ಅವರ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಅವರ ಆರ್ಥಿಕ ಸಬಲತೆಗೆ ಸರ್ಕಾರ ಒತ್ತು ನೀಡಬೇಕು ಎಂದು ಹೇಳಿದರು. ಈ ಕ್ರೀಡಾ ತರಬೇತುದಾರರು ಪ್ರೋತ್ಸಾಹ ಧನವನ್ನೇ ನಂಬಿಕೊಂಡು ತರಬೇತಿಯನ್ನು ಕೊಡುತ್ತಿದ್ದಾರೆ.ಅವರ ಜೀವನ ನಿರ್ವಹಿಸಲು ಕೂಡಲೇ ಸರಕಾರ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಅವರ ಜೀವನವನ್ನು ಕಾಪಾಡಬೇಕು ಎಂದು ಅವರು ಮನವಿ ಮಾಡಿದರು.