
ಬೀದರ :ನ.5:ಮಕ್ಕಳು ಕೇವಲ ಶೈಕ್ಷಣಿಕವಾಗಿ ಚಿಂತನೆ ಮಾಡದೆ ಕನಿಷ್ಠ ಆರೋಗ್ಯ ದೃಷ್ಟಿಯಿಂದಲಾದರೂ ದಿನನಿತ್ಯ ಕ್ರೀಡೆಗಳಲ್ಲಿ ತೊಡಗಿಸಿ ಕೊಳ್ಳಬೇಕೆಂದು ಡಾ. ನೀತಾ ಬೆಲ್ದಾಳೆ ನುಡಿದರು.
ಬಿದರಿ, ಬೀದರ ಜಿಲ್ಲೆಯ ಸಾಂಸ್ಕøತಿಕ ವೇದಿಕೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಸ್ಥೆಯ ಶಾಲೆಗಳ ಸಹಯೋಗದೊಂದಿಗೆ ಇಂದು ಘೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪ.ಪೂ.ಕಾಲೇಜು ಆವರಣದಲ್ಲಿ ಸಸಿಗೆ ನೀರೆರೆದು ಬಿದರಿ ಉತ್ಸವ ನಿಮಿತ್ತ ಆಯೋಜಿಸಿದ್ದ ಬಿದರಿ ಕ್ರೀಡೋತ್ಸವ ಉದ್ಘಾಟಿಸಿದ ಡಾ. ನೀತಾ ಶೈಲೇಂದ್ರ ಬೆಲ್ದಾಳೆ ಮಾತನಾದಿದರು.
ಪಠ್ಯ ಶಿಕ್ಷಣದ ಜೊತೆಗೆ ಇನ್ನಿತರ ಚಟುವಟಿಕೆ ಇದ್ದಾಗ ಮಕ್ಕಳ ಬೆಳವಣಿಗೆಗೆ ಇನ್ನಷ್ಟು ಪೂರಕವಾದ ವಾತಾವರಣ ಕಲ್ಪಿಸಿದಂತಾಗುತ್ತದೆ.
ಇಂದಿನ ಪಾಲಕರು ಸಹಿತ ಕ್ರೀಡೆ, ಸಂಗೀತ, ಸಾಂಸ್ಕೃತಿಕ ಚಟುವಟಿಕೆ ಪೆÇ್ರೀತ್ಸಾಹ ನೀಡಬೇಕು. ಸರಕಾರ ಹಾಗೂ ಬಿದರಿ ಸಾಂಸ್ಕೃತಿಕ ವೇದಿಕೆ ಜನಪರ ಕಾಳಜಿಯೊಂದಿಗೆ ಇಂಥ ಜಿಲ್ಲಾ ಮಟ್ಟದ ಕ್ರೀಡೆ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾದ ಸದಾಶಿವ ಬಡಿಗೇರ ಜಿಲ್ಲಾ ಅಧಿಕಾರಿಗಳು ಬಿಸಿಎಮ್ ಇಲಾಖೆ ಮಾತನಾಡುತ್ತ, ನಮ್ಮ ವಸತಿ ಶಾಲೆಗಳ ಮಕ್ಕಳಿಗೆ ಇದೊಂದು ದೊಡ್ಡ ಅವಕಾಶ. ಅನೇಕರಲ್ಲಿ ಪ್ರತಿಭೆ ಇರುವುದು ಸಹಜ. ಆದರೆ ಅದಕ್ಕೆ ಪೂರಕವಾದ ವೇದಿಕೆ ಕಲ್ಪಿಸಿ ಅವರಿಗೆ ಸಹಕಾರ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ದಿಶೆಯಲ್ಲಿ ಮಕ್ಕಳು ಕ್ರಿಯಾಶೀಲ ವಾಗಿ ತನ್ನನ್ನೇ ತಾನೆ ತೊಡಗಿಸಿಕೊಂಡು ಹುದುಗಿರುವ ಪ್ರತಿಭೆ ಹೊರಹಾಕಲು ಇದೊಂದು ಸುವರ್ಣ ಅವಕಾಶ. ಇದು ಇಡೀ ರಾಜ್ಯಕ್ಕೆ ಇದೊಂದು ಒಳ್ಳೆಯ ಮಾದರಿ ಕಾರ್ಯ ಹಾಗೂ ಒಳ್ಳೆಯ ಸಂದೇಶ ರವಾನಿಸಲು ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿದರಿ ಸಾಂಸ್ಕೃತಿಕ ವೇದಿಕೆ ಕೋಶಾಧ್ಯಕ್ಷರಾದ ಪವನ ಸೌದಿ ಮಾತನಾಡಿ ನಮ್ಮ ವೇದಿಕೆ ನಾಲ್ಕೈದು ವರ್ಷಗಳಿಂದ ಈ ರೀತಿ ಕಾರ್ಯ ಮಾಡುತ್ತ ಬಂದಿದೆ. ಈ ವರ್ಷ ಬೀದರ ಜಿಲ್ಲಾ ವಸತಿ ಶಾಲೆಯ ಎಲ್ಲ ಬಾಂಧವರು ಕೈ ಜೋಡಿಸಿದ್ದು ಹೆಮ್ಮೆ ತಂದಿದೆ. ನಮ್ಮ ಜೊತೆ ಡಾ. ಎಸ್ ಎಸ್ ಸಿದ್ಧಾರೆಡ್ಡಿ ಫೌಂಢೇಶನ್ ಅಧ್ಯಕ್ಷರಾದ ಗುರಮ್ಮ ಸಿದ್ದಾರೆಡ್ಡಿ ಅವರೂ ಸಹ ಸಹಕರಿಸಿದ್ದು ನಮ್ಮ ಉತ್ಸಾಹ ಇಮ್ಮಡಿಗೊಳಿಸಿದೆ ಎಂದರು.
ಬಿದರಿ ವೇದಿಕೆ ಅಧ್ಯಕ್ಷರಾದ ರೇಖಾ ಅಪ್ಪಾರಾವ್ ಸೌದಿ ಪ್ರಸ್ತಾವಿಕವಾಗಿ ಮಾತನಾಡಿ, ನಮ್ಮ ವೇದಿಕೆ ಹಲವು ದಿಶೆಯಲ್ಲಿ ಚಿಂತನೆ ಮಾಡಿ ಮೂರು ವರ್ಷಗಳಿಂದ ಸಂಗೀತ ದಿಗ್ಗಜರಿಗೆ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ನೀಡಿದ್ದು ಈ ಸಾಲಿನಲ್ಲಿ ಖ್ಯಾತ ಹಿನ್ನಲೆ ಗಾಯಕಿ ಲತಾ ಹಂಸಲೇಖಾ ಅವರಿಗೆ ಬಿದರಿ ರಾಜ್ಯ ದತ್ತಿ ಪ್ರಶಸ್ತಿಯನ್ನು ನಾಳೆ ಭಾನುವಾರ ನ. 5ರಂದು ಜಿಲ್ಲಾ ರಂಗಮಂದಿರದಲ್ಲಿ ನೀಡಲಾಗುತ್ತಿದೆ. ಮಕ್ಕಳು ತಮ್ಮ ದಿನ ನಿತ್ಯದ ಶಿಕ್ಷಣ ಜೊತೆಗೆ ಸಂಗೀತ ಅಳವಡಿಸಿ ಕೊಳ್ಳಲು ಸಲಹೆ ನೀಡಿದರು.
ಕ್ರೀಡಾಕೂಟದ ಪ್ರತಿಜ್ಞೆ ಯನ್ನು ಯುವಜನ ಕ್ರೀಡಾ ಇಲಾಖೆ ಸ.ನಿ.ಡಾ ಗೌತಮ ಅರಳಿ ನಡೆಸಿಕೊಟ್ಟರು.
ಚೆನ್ನಬಸವ ಹೇಡೆ ರಾಜ್ಯ ಪ್ರದಾನ ಕಾರ್ಯದರ್ಶಿ ಸ್ವಾಗತಿಸಿದರೆ ರವೀಂದ್ರ ಚಟನಳ್ಳೆ ಉಪಪ್ರಾಚಾರ್ಯರು ವಂದಿಸಿದರೆ ಶಿವಶಂಕರ ಟೋಕರೆ ನಿರೂಪಿಸಿದರು.
ವೇದಿಕೆ ಮೇಲೆ ಪ್ರಾಚಾರ್ಯರಾದ ಶರಣಪ್ಪ ಬಿರಾದಾರ, ಶ್ರೀಮಂತ ಸಪಾಟೆ, ಪೆÇ್ರ.ದೇವಿದಾಸ ತುಮಕುಂಟೆ ಪ್ರಾಚಾರ್ಯರು ವಸತಿ ಸಹಿತ ಪ್ರಥಮ ದರ್ಜೆ, ರಾಜಕುಮಾರ ಸ್ವಾಮಿ ಅಧ್ಯಕ್ಷ ರು ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಬೀದರ ಕಣಜೆ ಶಿವರಾಜ, ಶ್ರೀನಿವಾಸ ರೆಡ್ಡಿ , ದೇವಿದಾಸ ಜೋಶಿ ಹಾಗೂ ಎಲ್ಲಾ ಪ್ರಾಚಾರ್ಯರಾಗಿ, ಕ್ರೀಡಾ ಶಿಕ್ಷಕರು, ವಸತಿ ನಿಲಯಪಾಲಕರು ಹಾಜರಿದ್ದರು. ಪ್ರಥಮವಾಗಿ ಬಸವ ಕಲ್ಯಾಣ ಬೀದರ ಮಧ್ಯೆ ವಾಲಿಬಾಲ್ ಪಂದ್ಯಾವಳಿಯ ಏರ್ಪಡಿಸಿದಾಗ ಡಾ. ನೀತಾ ಬೆಲ್ದಾಳೆ ಟಾಸ್ ಹಾರಿಸಿದರೆ, ರೇಖಾ ಅಪ್ಪಾರಾವ ಸೌದಿ ಸರ್ವಿಸ್ ಮಾಡಿ ಚಾಲನೆ ನೀಡಿದರು.