ಕ್ರೀಡಾಪಟು ಚಂದನ್ ಬೆಳ್ಳಿ ಪದಕ

ಕೋಲಾರ, ಮೇ ೨೯: ಹೊನ್ನೇನಳ್ಳಿ ಗ್ರಾಮದ ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಜಿ.ದೊರೆಸ್ವಾಮಿಯವರ ಮೊಮ್ಮಗ ಆರ್.ಎಲ್.ಜಾಲಪ್ಪ ಕೇಂದ್ರೀಯ ವಿದ್ಯಾಲಯ ೭ನೇ ತರಗತಿಯ ಚಂದನ್ ಎಸ್ ಇತ್ತೀಚೆಗೆ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆತ ಶಾಟ್‌ಫುಟ್ ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕವನ್ನು ಪಡೆದು ಲ್ಲೆಗೂ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾನೆ.
ಚಂದನ್ ಎಸ್ ನನ್ನು ಊರಿನ ಗ್ರಾಮಸ್ಥರು ಹಾಗೂ ಎಲ್ಲಾ ಕ್ರೀಡಾಪಟುಗಳು ತುಂಬು ಹೃದಯದಿಂದ ಅಭಿನಂದಿಸಿರುತ್ತಾರೆ.