ಕ್ರೀಡಾಪಟುವಿಗೆ ಸರ್ಕಾರ ಪ್ರೋತ್ಸಾಹ ನೀಡಲಿ  : ಷಡಕ್ಷರಮುನಿ ಸ್ವಾಮೀಜಿ

ಸಂಜೆವಾಣಿ ವಾರ್ತೆ

 ಹಿರಿಯೂರು.ಸೆ.೧೭ : ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದ ಕುಮಾರಿ ವರ್ಷ ಉಮಾಪತಿಯವರು ಅಂತರರಾಷ್ಟ್ರೀಯ  ಕ್ರಿಕೆಟ್ ತಂಡದ ನಾಯಕಿಯಾಗಿ ಜಯಗಳಿಸಿ ಕೀರ್ತಿ  ಪಡೆದಿದ್ದು ಸಂತಸದ ವಿಚಾರವಾಗಿದೆ ಎಂದು ಇವರಿಗೆ ಹಿರಿಯೂರಿನ ರೋಟರಿ ಸಭಾಭವನದಲ್ಲಿ  ಆದಿವಾಲದ ಚೇತನ ಯುವಕ ಸಂಘ ಮತ್ತು ವಿವಿಧ ಸಂಘಟನೆಗಳ ಸಹಾಯೋಗದಲ್ಲಿ ಅಭಿನಂದನ ಸಮಾರಂಭ ಏರ್ಪಡಿಸಲಾಗಿತ್ತು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಅವರು ವರ್ಷ ಉಮಾಪತಿ ಅವರ ಉತ್ಸಾಹ ಸ್ಫೂರ್ತಿಗೆ ಮೆಚ್ಚಿಗೆ ವ್ಯಕ್ತಪಡಿಸಿ ಇನ್ನು ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು ಹಾಗೂ ಕ್ರೀಡಾ ಇಲಾಖೆ ಮತ್ತು ಸರ್ಕಾರ ಈ ಕ್ರೀಡಾಪಟುವಿ ಗೆ  ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.ಡಿವೈಎಸ್ಪಿ ಚೈತ್ರ ರವರು ಮಾತನಾಡಿ ಗ್ರಾಮೀಣ ಪ್ರದೇಶದ ಒಬ್ಬ ಅಂಧ ಯುವತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿರುವುದು ತುಂಬಾ ಸಾಹಸದ ಕಾರ್ಯವಾಗಿದೆ ಎಂದು ಹೇಳಿದರು ಚೇತನ ಯುವಕ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಫಕೃದ್ದೀನ್  ಪೌರಾಯುಕ್ತ ರಾದ ಹೆಚ್ ಮಹಾಂತೇಶ್,  ಯುವ ಪ್ರಶಸ್ತಿ ಪುರಸ್ಕೃತರಾದ ಚಮನ್ ಶರೀಫ್  ತ್ರಯಂಬಕಮೂರ್ತಿ ಮತ್ತಿತರರು ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷರಾದ ದೇವರಾಜ ಮೂರ್ತಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವರ್ಷ ಉಮಾಪತಿ ಯವರ ಪೋಷಕರು ಭಾಗವಹಿಸಿದ್ದರು. ವಿವಿಧ ಸಂಘಟನೆಗಳ ವತಿಯಿಂದ ಕ್ರೀಡಾಪಟು ವರ್ಷ ಉಮಾಪತಿಯವರಿಗೆ ಅಭಿನಂದಿಸಲಾಯಿತು ಇದೇ ಸಂದರ್ಭದಲ್ಲಿ ಸಚಿವ ಡಿ ಸುಧಾಕರ್ ಅವರು ಕ್ರೀಡಾಪಟು ವರ್ಷ ಉಮಾಪತಿಯವರಿಗೆ ಪ್ರೋತ್ಸಾಹ ಧನವಾಗಿ ನೀಡಿದ್ದ 50,000 ಹಸ್ತಾಂತರಿಸಲಾಯಿತು.