ಕ್ರೀಡಾಪಟುಗಳ ಆಯ್ಕೆ:ನುಡಿನಮನ ಕಾರ್ಯಕ್ರಮ

ಧಾರವಾಡ ಜ.13: ಧಾರವಾಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ವತಿಯಿಂದ ಅಥ್ಲೆಟಿಕ್ಸ್ ಕ್ರೀಡಾಪಟುಗಳ ಆಯ್ಕೆಯ ಉದ್ಘಾಟನಾ ಸಮಾರಂಭ ಹಾಗೂ ದಿ. ಆರ್. ಎನ್. ಶೆಟ್ಟಿಯವರಿಗೆ ನುಡಿನಮನ ಕಾರ್ಯಕ್ರಮ ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಿತು.
ಆಯ್ಕೆಯಾದ ಕ್ರೀಡಾಪಟುಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಮೂಡುಬಿದಿರೆಗೆ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಸ್ಸಾಂಗೆ ಕಳುಹಿಸಲಾಗುವುದು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಮೇಯರ್ ಶಿವು ಹಿರೇಮಠ ಮತ್ತು ಹೈಕೋರ್ಟ್ ವಕೀಲರಾದ ಪಿ. ಹೆಚ್. ನೀರಲಕೇರಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯ ಕ್ರೀಡಾಪಟುಗಳು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದು, ಯಾವುದೇ ಕ್ರೀಡಾಪಟುಗಳು ಉದ್ವೇಗಕ್ಕೆ ಒಳಗಾಗದೆ, ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ, ಸಮಚಿತ್ತದಿಂದ ಆಟವಾಡಬೇಕು ಎಂದು ಕರೆ ನೀಡಿದರು. ಜೊತೆಗೆ ಜಿಲ್ಲಾ ಕ್ರೀಡಾಂಗಣಕ್ಕೆ ದೇಣಿಗೆ ನೀಡಿದ ದಿವಂಗತ ಡಾಕ್ಟರ್ ಆರ್. ಎನ್. ಶೆಟ್ಟಿ ಯವರನ್ನು ನೆನೆದು ಅವರ ಸಾಧನೆಯನ್ನು ಸ್ಮರಿಸಿದರು.
ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಕ್ರೀಡಾಪಟುಗಳ ಯಶಸ್ವಿಗಾಗಿ ಸಂಸ್ಥೆಯು ಹಗಲಿರುಳು ಶ್ರಮಿಸುತ್ತಿದೆ. ಹೀಗಾಗಿ ಕ್ರೀಡಾಪಟುಗಳುಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ಹೇಳಿದರು. ಧಾರವಾಡ ಜಿಲ್ಲೆಗೆ ಅದರಲ್ಲೂ ಕ್ರೀಡಾಕ್ಷೇತ್ರಕ್ಕೆ ಆರ್. ಎನ್. ಶೆಟ್ಟಿಯವರ ಕೊಡುಗೆ ಅಪಾರವಾಗಿದೆ. ಅವರ ಕೆಲಸ ಕಾರ್ಯಗಳು ಜಿಲ್ಲೆಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ.
ಸಂಸ್ಥೆಯ ಕೊಶಾಧ್ಯಕ್ಷ ಬಸವರಾಜ ತಾಳಿಕೋಟಿ ಸ್ವಾಗತಿಸಿ, ನಿರೂಪಿಸಿದರು ಕಾರ್ಯದರ್ಶಿ ಕೆ. ಎಸ್. ಭೀಮಣ್ಣವರ ವಂದಿಸಿದರು. ವೇದಿಕೆ ಮೇಲೆ ಶ್ರೀಮತಿ ಶ್ಯಾಮಲಾ ಪಾಟೀಲ, ಶ್ರೀಮತಿ ರಾಜೇಶ್ವರಿ ಪಾಟೀಲ, ಸುಜಯಕುಮಾರ, ಧವನೆ, ಮಹಾಂತೇಶ ಬಳ್ಳಾರಿ ಮತ್ತು ಇತರರು ಇದ್ದರು.