
ಕಾಗವಾಡ:ನ.16: ವಿಶ್ವ ಪ್ರಸಿದ್ಧ ಕ್ರೀಡಾಪಟು ಧ್ಯಾನಚಂದ ಅವರಂತೆ ಪ್ರತಿಯೊಬ್ಬರೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವ ಕನಸು ಕಾಣಬೇಕು. ಆಗ ಮಾತ್ರ ಸಾಧನೆ ಶಿಖರ ಏರಲು ಸಾಧ್ಯ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ರಾಜು ಕಾಗೆ ಅಭಿಮಾನಿಗಳ ಬಳಗದ ವತಿಯಿಂದ ರಾಜ್ಯೋತ್ಸವ ಹಾಗೂ ದೀಪಾವಳಿಯ ನಿಮಿತ್ತವಾಗಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸತತ ಮೂರು ಓಲಂಪಿಕ್ ಕ್ರೀಡಾಕೂಟದಲ್ಲಿ 3 ಚಿನ್ನದ ಪದಕ ಗೆದ್ದ ಧ್ಯಾನಚಂದರವರು ಅಡಲ್ ಹಿಟ್ಲ ನೀಡಿದ ಆಮಿಷಕ್ಕೊಳಗಾಗದೆ ಭಾರತನನ್ನ ಕರ್ಮಭೂಮಿ ನಾನು ಬಿಡಲಾರೆ ಎಂದು ನೇರವಾಗಿ ಹೇಳುವಂತಹ ಮಹಾನ್ ಕ್ರೀಡಾಪಟು. ಅಂಥ ಕ್ರೀಡಾಪಟುಗಳು ನೀವಾಗಬೇಕು ಎಂದರು.ಡಾ.ಅಶೋಕ ಪಾಟೀಲ, ಶಂಕರ ವಾಘಮೊಡೆ, ಡಾ.ಅರವಿಂದರಾವ್ ಕಾರ್ಚಿ, ವಿನೋದ ಬರಗಾಲೆ, ವೃಷಭ ಚೌಗುಲೆ, ಅಣ್ಣಾ ಅರವಾಡೆ, ರಾಜು ಮದನೆ, ರಾಜು ಮುಜಾವರ, ರಾಜು ಅರ್ಜುನವಾಡ, ಮಹಾದೇವಿ ಮಾಕಣ್ಣವರ, ಕುಮಾರ ಪಾಟೀಲ, ಶ್ರೀನಿವಾಸ ಕಾಂಬಳೆ, ಇಸ್ಮಾಯಿಲ್ ಮುಲ್ಲಾ, ಚಿದಾನಂದ ಸಾಂಗಲಿ, ಸಂಜಯ್ ಮುಕುಂದ, ಸೋಯಬ್ ಮುಲ್ಲಾ, ನಜೀರ ಮುಲ್ಲಾ, ಮುಜಾವರ ಮುಲ್ಲಾ, ವಿನಾಯಕ ಸಾಂಗಲಿ, ರೋಹಣ ನಾಂದ್ರೆ ವೃಷಭ ಗಣಿ, ಪ್ರಶಾಂತ ಗಣಿ, ಸುಶಾಂತ ಬೆಳ್ಳಂಕಿ ಸೇರಿದಂತೆ ಇತರರು ಇದ್ದರು.