ಕ್ರೀಡಾಪಟುಗಳಿಗೆ ಲಸಿಕೆ ನೀಡಲು ಮನವಿ

ದಾವಣಗೆರೆ.ಜೂ.೧೦:  ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಮೊದಲ ಆದ್ಯತೆ ಕೊಟ್ಟು ಕೊರೋನಾ ಲಸಿಕೆ ನೀಡಬೇಕೆಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ಒತ್ತಾಯ ಮಾಡಿದ್ದಾರೆ ಕೊರೊನ ಮಹಾಮಾರಿಯ ಇಂತಹ ಸಂದರ್ಭದಲ್ಲಿ ದೇಶಾದ್ಯಂತ ಬಡ ಕುಟುಂಬಗಳಿಗೆ ತುಂಬ ಕಷ್ಟವಾಗಿದೆ ಹದಿನೆಂಟರಿಂದ ಐವತ್ತು ವರ್ಷದ ಒಳಗಿನ ಜನಗಳು ಸಾವಿಗೀಡಾಗುತ್ತಿದ್ದು ಕ್ರೀಡಾಪಟುಗಳು ಈ ಮಧ್ಯ ವಯಸ್ಸಿನವರೇ ಹೆಚ್ಚಾಗಿದ್ದಾರೆ ಅವರಿಗೆ ಈ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಜಿಲ್ಲಾಡಳಿತ ಜಿಲ್ಲಾ ಕ್ರೀಡಾಪಟುಗಳಿಗೆ ಆದ್ಯತೆ ಕೊಟ್ಟು ಜಿಲ್ಲಾ  ಕ್ರೀಡಾಂಗಣದಲ್ಲಿ ಎಲ್ಲಾ ಕ್ರೀಡಾಪಟುಗಳಿಗೆ  ಲಸಿಕೆಯನ್ನು ನೀಡಬೇಕಾಗಿ ಜಿಲ್ಲಾಧಿಕಾರಿಗಳಲ್ಲಿ ಮತ್ತು ಜಿಲ್ಲಾ ಯುವಜನ ಕ್ರೀಡಾ ಇಲಾಖೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಂಘದ ಪದಾಧಿಕಾರಿಗಳಾದ  ಜಯಪ್ರಕಾಶ್, ಕುರಡಿಗಿರೀಶ್ ಶಿವಗಂಗಾ ಶ್ರೀನಿವಾಸ್ ಜಿ ಎನ್ ಗೋಪಾಲಕೃಷ್ಣ ಶ್ರೀನಿವಾಸ್ ಕೇರಂ ಗಣೇಶ್ ಯುವರಾಜ್ ಟಿ ಇನ್ನು ಮುಂತಾದವರಿದ್ದರು.