ಕ್ರೀಡಾಕೂಟ: ಗುರುಕುಲ ಕಾಲೇಜು ಉತ್ತಮ ಸಾಧನೆ

ತಿಪಟೂರು, ಸೆ. ೨- ಪದವಿ ಪೂರ್ವ ಕಾಲೇಜು ತಾಲ್ಲೂಕು ಕ್ರೀಡಾಕೂಟದಲ್ಲಿ ನಗರದ ಶ್ರೀ ಗುರುಕುಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಜರುಗಿದ ತಾಲ್ಲೂಕು ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶ್ರೀ ಗುರುಕುಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಾಲಿಬಾಲ್ ಬಾಲಕ ಮತ್ತು ಬಾಲಕಿಯರು ಪ್ರಥಮ ಸ್ಥಾನ ೪x೪೦೦ ರಿಲೆಯಲ್ಲಿ ಬಾಲಕ ಮತ್ತು ಬಾಲಕಿಯರು ಪ್ರಥಮ ಸ್ಥಾನ. ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ. ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ ಚೆಸ್, ಯೋಗ, ಗುಂಡು ಎಸೆತ, ೧೦೦, ೨೦೦, ೮೦೦, ೫೦೦೦ ಮೀಟರ್ ಓಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟಾರೆ ತಾಲ್ಲೂಕು ಕ್ರೀಡಾಕೂಟದಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ.
ಕಾಲೇಜು ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಗುರುಗಳಾದ ಶ್ರೀ ಇಮ್ಮಡಿ ಕರಿಬಸವದೇಶಿ ಕೇಂದ್ರ ಸ್ವಾಮೀಜಿ ಆಶೀರ್ವದಿಸಿದರು. ಕಾರ್ಯದರ್ಶಿಗಳಾದ ಸಿದ್ದರಾಮಯ್ಯ. ಸಿಇಓ ಬಿ.ಎಂ. ಹರಿಪ್ರಸಾದ್, ಪ್ರಾಂಶುಪಾಲರಾದ ಎಸ್. ಮಹೇಶಯ್ಯ, ಮಹಾಲಿಂಗಯ್ಯ, ಮಂಜುನಾಥ್, ಯತೀಶ್, ಹಾಗೂ ಉಪನ್ಯಾಸಕರುಗಳು ಅಭಿನಂದನೆ ಸಲ್ಲಿಸಿ ಜಿಲ್ಲಾ ಕ್ರೀಡಾಕೂಟದಲ್ಲೂ ಉತ್ತಮ ಸಾಧನೆ ಮಾಡಲು ಹಾರೈಸಿದರು.