ಕ್ರೀಡಾಕೂಟ: ಕಲ್ಲಹಂಗರಗಾ ವಿದ್ಯಾರ್ಥಿಗಳ ಸಾಧನೆ

ಕಲಬುರಗಿ,ಆ.8- ಸರ್ಕಾರಿ ಪ್ರೌಢಶಾಲೆ ಕಲ್ಲಹಂಗರಗಾ ಶಾಲೆಯ ವಿದ್ಯಾರ್ಥಿಗಳು ಇಚೇಗೆ ನಡೆದ ವಲಯ ಮಟ್ಟದ ಕ್ರೀಡಾಕೂಡ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ವಾಲಿಬಾಲ್, 400 ಮೀಟರ್ ಓಟ, ಎತ್ತರ ಜಿಗಿತ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಪಡೆದ ಈ ವಿದ್ಯಾರ್ಥಿಗಳು, ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರ ಸಿಬ್ಬಂದಿವರ್ಗದವರು ಮತ್ತು ದೈಹಿಕ ಶಿಕ್ಷಣದ ಶಿಕ್ಷಕಿ ಯಾದ ಸಂಗೀತ ಠಾಕೂರ್ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಮುಖ್ಯ ಗುರುಗಳು ಶ್ರೀಮತಿ ಇಂದಿರಾ ಬಾಯಿ. ದೈಹಿಕ ಶಿಕ್ಷಣ ಶ್ಶಿಕ್ಷಕರಾದ ಶ್ರೀಮತಿ ಸಂಗೀತ ಠಾಕೂರ್.ಹಾಗೂ ಸಿಬ್ಬಂದಿ ವರ್ಗದವರು ವಿಜೇತ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸಂತಸವನ್ನು ಹಂಚಿಕೊಂಡರು.