ಕ್ರೀಡಾಕೂಟ ಆಯೋಜನೆ ಶ್ಲಾಘನೀಯ

ಬಾದಾಮಿ, ಏ 5: ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ಸಿದ್ಧಾರೂಢ ಕೊಪ್ಪದ ಇವರು ವಿಕಲಚೇತನರೂ ಸಹ ಸಮಾಜದಲ್ಲಿ ಎಲ್ಲರಂತೆ ಎಲ್ಲ ರಂಗಗಳಲ್ಲಿ ಮುಂದೆ ಬರಲಿ ಎಂಬ ಉದ್ದೇಶದಿಂದ ಕ್ರೀಡಾಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಗ್ರಾ.ಪಂ.ಸದಸ್ಯ ಸಿದ್ದಾರೂಢ ಹದ್ಲಿ ಹೇಳಿದರು.
ಅವರು ತಾಲೂಕಿನ ಕೆಂದೂರ ಗ್ರಾಮದ ಹೊರವಲಯದ ಶ್ರೀ ವೀರಶೈವ ಪ್ರಗತಿ ಶೀಲ ಸಂಸ್ಥೆಯ ಆವರಣದಲ್ಲಿ ಪ್ರಥಮ ಬಾರಿಗೆ ವಿಕಲಚೇತನರಿಗಾಗಿ ಆಯೋಜಸಲಾಗಿದ್ದ ರಾಜ್ಯಮಟ್ಟದ ವೀಲಚೇರ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಸ್ವತಃ ತಾನೂ ಸಹ ವಿಕಲಚೇತನರಾದರೂ ಸಹಿತ ಸಿದ್ದಾರೂಢ ಕೊಪ್ಪದ ಇವರು ವಿಕಲಚೇತನರಿಗೆ ಮಾದರಿಯಾಗಿದ್ದಾರೆ. ತಮ್ಮಂತೆಯೇ ಎಲ್ಲ ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಿರುವುದು ನಮ್ಮೂರಿನ ಹೆಮ್ಮೆ ಎಂದು ಹೇಳಿದರು.
ಕೆಂದೂರ ಗ್ರಾಮದ ಪ್ರಭುಸ್ವಾಮಿ ಮಹಾಸ್ವಾಮಿಗಳು ಮಾತನಾಡಿದರು. ಈ ವೀಲ್ ಚೇರ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಬಾಗಲಕೋಟ, ವಿಜಯಪೂರ, ಬಳ್ಳಾರಿ, ಗದಗ, ಮೈಸೂರು, ರಾಯಚೂರು ಜಿಲ್ಲೆಗಳಿಂದ ಕ್ರೀಡಾಪಟುಗಳ ತಂಡಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಸಿದ್ದಪ್ಪ ಗೌಡರ, ಹನಮಂತ ಕೊಪ್ಪದ, ರಂಗಪ್ಪ ಹಾದಿಮನಿ, ವಿಠ್ಠಲ ಲಮಾಣಿ, ರಮೇಶ ಧನಗರ, ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ಸಿದ್ದಾರೂಢ ಕೊಪ್ಪದ, ರುದ್ರಗೌಡ ತಮ್ಮನಗೌಡ್ರ, ಹನಮೇಶ ನಾಯಕ, ಎಂ.ಬಿ.ಪಾಟೀಲ, ಲೋಕಣ್ಣ ಪರಸನ್ನವರ, ಸುರೇಶ ಕೋಟಿ, ಶರಣು ಬಳ್ಳಾರಿ, ಚೌಡಯ್ಯ ಪ್ರಭುಸ್ವಾಮಿ, ಶಂಕರ ನಾಗರಡ್ಡಿ, ಗ್ರಾಮದ ಮತ್ತು ವಿವಿದ ಜಿಲ್ಲೆಗಳಿಂದ ಆಗಮಿಸಿದ ವಿಕಲಚೇತನರು, ತಂಡಗಳು ಹಾಜರಿದ್ದರು. ಸುರೇಶ ಹಡಪದ ಸ್ವಾಗತಿಸಿ, ನಿರೂಪಿಸಿದರು. ರಮೇಶ ಧನಗರ ವಂದಿಸಿದರು.