ಕ್ರೀಡಾಕೂಟ:ಯಳನಡು ಶಾಲೆಗೆ ಸಮಗ್ರ ಪ್ರಶಸ್ತಿ

ಹುಳಿಯಾರು, ಆ. ೧೦- ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಹೋಬಳಿ ಮಟ್ಟದ ಎ ವಿಭಾಗದ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟದಲ್ಲಿ ಯಳನಡು ಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ. ಗುಂಪು ಆಟದಲ್ಲಿ ಗಂಡು ಮಕ್ಕಳ ಖೋ ಖೋ, ಕಬ್ಬಡ್ಡಿ, ಹೆಣ್ಣು ಮಕ್ಕಳ ಖೋಖೋ, ೪*೧೦೦ ರಿಲೇ ಪ್ರಥಮ ಸ್ಥಾನ, ಅಥ್ಲೆಟಿಕ್ಸ್ ಆಟಗಳಲ್ಲಿ ಎತ್ತರ ಜಿಗಿತದಲ್ಲಿ ನಿಂಗರಾಜು ಮತ್ತು ಶಿಲ್ಪಾ ಪ್ರಥಮ ಸ್ಥಾನ, ೪೦೦ ಮೀ ಓಟದಲ್ಲಿ ನಿಂಗರಾಜು ಮತ್ತು ಲಕ್ಷ್ಮಿಪ್ರಿಯಾ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ಗಜೇಂದ್ರ, ಚಕ್ರ ಎಸೆತದಲ್ಲಿ ಲಿಖಿತ್ ಪ್ರಥಮ ಸ್ಥಾನ, ೪೦೦ ಮೀ ಓಟದಲ್ಲಿ ನಾಗಪ್ರಸಾದ್ ದ್ವಿತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ಥ್ರೋ ಬಾಲ್ ಮತ್ತು ಬಾಲಕಿಯರ ಷಟಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ, ಬಾಲಕರ ಚಕ್ರ ಎಸೆತದಲ್ಲಿ ಲಿಖಿತ್ ತೃತೀಯ ಸ್ಥಾನ, ಬಾಲಕಿಯರ ಎತ್ತರ ಜಿಗಿತದಲ್ಲಿ ನಮಿತಾ ಮತ್ತು ಉದ್ದ ಜಿಗಿತದಲ್ಲಿ ಆಯಿಷಾ ತೃತೀಯ ಸ್ಥಾನ ಪಡೆದಿರುದ್ದಾರೆ. ಒಟ್ಟಾರೆ ಹೆಣ್ಣು ಮಕ್ಕಳ ಚಾಂಪಿಯನ್ ಷಿಪ್ ಮತ್ತು ಗಂಡು ಮಕ್ಕಳ ಚಾಂಪಿಯನ್ ಷಿಪ್ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ರಂಗಧಾಮಯ್ಯ, ಯಳನಡು ಶಾಲೆಯ ದೈಹಿಕ ಶಿಕ್ಷಕಿ ಸುಮ, ಸಹ ಶಿಕ್ಷಕರಾದ ಲತಾ, ಸುಮಿತ್ರ, ಅಮೂಲ್ಯ, ನರಸಿಂಹಮೂರ್ತಿ, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.