ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ

ಧಾರವಾಡ ಮಾ.21-: ಕರ್ನಾಟಕ ಸರ್ಕಾರ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಜೆ.ಎಸ್.ಎಸ್. ಆರ್.ಎಸ್.ಹುಕ್ಕೇರಿಕರ ಕಲಾ & ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೇಟಿಕ್ಸ ಕ್ರೀಡಾಕೂಟದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ & ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಕು.ಆನಂದ ಕವಲಗೇರಿ, 1500 ಮೀ, 3000 ಮೀ ಹಾಗೂ 5.ಕಿ.ಮಿ. ಕ್ರಾಸ್ ಕಂಟ್ರಿ ಓಟದಲ್ಲಿ ಪ್ರಥಮ ಸ್ಥಾನ ಮತ್ತು ಕು. ಕರೇಪ್ಪ ಈಸಗುಂಬಳ್ಳಿ 5ಕಿ.ಮಿ.ಕ್ರಾಸ್ ಕಂಟ್ರಿ ಓಟದಲ್ಲಿ 6ನೇ ಸ್ಥಾನ ಹಾಗೂ ಕುಮಾರಿ ಅಶ್ವೀನಿ ಪಾಟೀಲ 100 ಮೀ.ಹಾಗೂ 200 ಮೀ ಓಟದಲ್ಲಿ ದ್ವೀತಿಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೇಯಾಗಿದ್ದಾರೆ.
ಕ್ರೀಡಾಪಟುಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ವ್ಹಿ.ಎಸ್.ದವನೆ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಎಮ್.ಎನ್.ಮೋರೆ, ಉಪಾಧ್ಯಕ್ಷರಾದ ವಾಯ್. ಬಿ. ಚವ್ಹಾಣ, ಕಾರ್ಯಾಧ್ಯಕ್ಷರಾದ ಸುಭಾಸ ಶಿಂಧೆ, ಗೌ.ಕಾರ್ಯದರ್ಶಿಗಳಾದ ಆರ್. ಟಿ. ಬಿರಜೆನವರ ಸಹ-ಕಾರ್ಯದರ್ಶಿಗಳಾದ ಡಿ.ಸಿ.ಮೋಟೆ ನಿರ್ದೇಶಕರುಗಳಾದ ಈಶ್ವರ ಬಿ. ಪಾಟೀಲ, ಸುಭಾಸ ಡಿ.ಪವಾರ, ಅನಿಲಕುಮಾರ ಎಲ್.ಭೋಸಲೆ, ವಿಠ್ಠಲ ವ್ಹಿ.ಚವ್ಹಾಣ, ಮಲ್ಲೇಶಪ್ಪಾ ಹೆಚ್. ಶಿಂದೆ, ಸಂತೋಷ ಎಸ್.ಬಿರ್ಜೇನವರ, ರಾಜು ಜೆ. ಕಾಳೆ, ಸುನಿಲ ಪಿ. ಮೋರೆ, ಪ್ರಸಾದ ಎಸ್. ಹಂಗಳಕಿ ಹಾಗೂ ಪ್ರಾಚಾರ್ಯರಾದ ಎಸ್.ಎಂ.ಸಂಕೊಜಿ ಮತ್ತು ಎಲ್ಲ ಸಿಬ್ಬಂದಿವರ್ಗ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ನಿರ್ದೇಶಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.