ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ

ಕೋಲಾರ,ಆ,೭-ನಗರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲೆ ರಾಧಮ್ಮ, ದೈಹಿಕ ಶಿಕ್ಷಣಾಧಿಕಾರಿ ಹಾಗೂ ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್.ಚೌಡಪ್ಪ ಅಭಿನಂದಿಸಿದರು.
ವಿಜೇತ ವಿದ್ಯಾರ್ಥಿಗಳೆಂದರೆ ಮಹಮದ್ ಯೂಸೆಫ್ ಹಡಲ್ಸ್-ಪ್ರಥಮ. ೪೦೦ ಮೀಟರ್ ಓಟ -ದ್ವಿತೀಯ ಸ್ಥಾನ. ಹರ್ಷಿತ್ ಬಾಬು.ಕೆ- ಉದ್ದ ಜಿಗಿತ ಮತ್ತು ಎತ್ತರ ಜಿಗಿತ ದ್ವಿತೀಯ ಸ್ಥಾನ. ಶಶಾಂಕ್ ಎಂ.ಸಿ-೧೫೦೦ ಮೀಟರ್ ಓಟ ದ್ವಿತೀಯ ಸ್ಥಾನ. ಪ್ರಶಾಂತ್-ತೃತೀಯ ಸ್ಥಾನ. ಮನೋಜ್ ಕುಮಾರ್ ೩೦೦೦ ಮೀಟರ್ ಓಟ ತೃತೀಯ ಸ್ಥಾನ.
ವಾಲಿಬಾಲ್ ಪ್ರಥಮ ಸ್ಥಾನ ಮನೋಜ್.ಎಂ, ಪವನ್, ಹರ್ಷಿತ್ ಬಾಬು.ಕೆ, ಪ್ರಶಾಂತ್.ಜಿ, ಶಶಾಂಕ್, ನಿಖಿಲ್, ಶಶಿಕಿರಣ್, ನವೀನ್, ಯುವರಾಜ್, ಸಂಜಯ್, ಗಗನ್, ನಿರ್ಮಲ್, ಸಾಧಕರಾಗಿ ಹೊರಹೊಮ್ಮಿದ್ದಾರೆ.
ವಿಜೇತರಾದ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರಾದ ಕೆಂಪೇಗೌಡ, ಮುಕುಂದ, ನಾಜಿಮಾ.ಬಿ, ರಮೇಶ್, ರಹಮತ್ ಉನ್ನಿಸಾ ರಾಧ, ದಾಕ್ಷಾಯಿಣಿ, ಉಷಾ ರಾಣಿ, ಪ್ರಕಾಶ್, ತೋಯಿಬಾ, ನಾರಾಯಣಸ್ವಾಮಿ ಮಂಜುನಾಥ್, ಶ್ರೀಧರ್, ಚಲಪತಿ ವೆಂಕಟೇಶಪ್ಪ ವಿಜೇತರಿಗೆ ಶುಭ ಕೋರಿದರು.