ಕ್ರೀಡಾಕೂಟದಲ್ಲಿ ರಿಲಾಯನ್ಸ್ ಶಾಲಾ ಮಕ್ಕಳ ಉತ್ತಮ ಸಾಧನೆ

ತಾಳಿಕೋಟೆ:ಆ.13: ಪಟ್ಟಣದಲ್ಲಿ ನಡೆದ ತಾಳಿಕೋಟೆ ಕ್ಲಸ್ಟರ್ ಮಟ್ಟದ ಉತ್ತರ ವಲಯದ ಕ್ರೀಡಾಕೂಟದಲ್ಲಿ ಪಟ್ಟಣದ ರಿಲಾಯನ್ಸ್ ಎಜ್ಯೂಕೇಶನ್ ಸೋಸಾಯಿಟಿಯಡಿಯಲ್ಲಿ ನಡೆಯುತ್ತಿರುವ ರಿಲಾಯನ್ಸ್ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.

ಬಾಲಕೀಯರ ಗುಂಪು ಆಟದಲ್ಲಿ ರಿಲೇ ಮತ್ತು ಥ್ರೋ ಬಾಲ್‍ದಲ್ಲಿ ಪ್ರಥಮ, ಬಾಲಕೀಯರ ವೈಯಕ್ತಿಕ ಆಟ 100 ಮೀಟರ್ ಓಟದಲ್ಲಿ ಸಮೀಕಾ ಬೇಪಾರಿ ಪ್ರಥಮ, 200 ಮೀಟರ್ ಓಟದಲ್ಲಿ ಬೀಬೀಆಯಿಶಾ ಬೇಪಾರಿ ದ್ವಿತೀಯ ಸ್ಥಾನಗಳಿಸಿದ್ದಾರೆ.

ಬಾಲಕರ ವೈಯಕ್ತಿಕ ಆಟದಲ್ಲಿ 100 ಮೀಟರ್ ಓಟದಲ್ಲಿ ಮೋಶಿನ್ ಡಾಲಾಯತ್ ಪ್ರಥಮ, 200 ಮೀಟರ್ ಓಟದಲ್ಲಿ ಎಂ.ಡಿ.ಜೀಯಾನ ದ್ವಿತೀಯ, ಗುಂಡು ಎಸೆತದಲ್ಲಿ ಶಾಹೇಜಾದ ಕೊರವಾರ ತೃತೀಯ ಸ್ಥಾನ ಗಳಿಸಿದ್ದಾರೆ.

ಈ ವಿಧ್ಯಾರ್ಥಿಗಳ ಸಾಧನೆಗೆ ರಿಲಾಯನ್ಸ್ ಎಜ್ಯೂಕೇಶನ್ ಸೋಸಾಯಿಟಿ ಸಂಸ್ಥೆಯ ಅಧ್ಯಕ್ಷ ಎ.ಎಸ್.ನಮಾಜಕಟ್ಟಿ, ಕಾರ್ಯದರ್ಶಿ ಇಸಾಕ ನಮಾಜಕಟ್ಟಿ, ಮುಖ್ಯಗುರುಗಳಾದ ಶ್ರೀಮತಿ ಶಬಾನಾ ಚೋರಗಸ್ತಿ, ಶ್ರೀಮತಿ ಬಿ.ಎ.ವಠಾರ, ಸಹ ಶಿಕ್ಷಕ ಜೆ.ಆಯ್.ಸಂಗಾಪೂರ, ಶ್ರೀಮತಿ ಎಚ್.ಎ.ಅರಬೋಳ, ದೈಹಿಕ ಶಿಕ್ಷಕ ಸಿ.ಜಿ.ಗೌಡರ, ಅವರು ಅಭಿನಂದಿಸಿದ್ದಾರೆ.