
ತಾಳಿಕೋಟೆ:ಆ.11: ಪಟ್ಟಣದಲ್ಲಿ ನಡೆದ ತಾಳಿಕೋಟೆ ಕ್ಲಸ್ಟರ್‍ನ ಉತ್ತರ ವಲಯದ ಕ್ರೀಡಾಕೂಟದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಬಾಲಕರ ಕಬ್ಬಡ್ಡಿಯಲ್ಲಿ ಮತ್ತು ಖೋ ಖೋದಲ್ಲಿ ಪ್ರಥಮ, ಬಾಲಕೀಯರ ವಿಭಾಗದಲ್ಲಿ ಖೋಖೋದಲ್ಲಿ ದ್ವಿತೀಯ, 100 ಮೀಟರ್ ಓಟದಲ್ಲಿ ರೇಷ್ಮಾ ಜಾಧವ ಪ್ರಥಮ, ಸ್ಥಾನಗಳಿದ್ದಾರೆ.
ಇದು ಅಲ್ಲದೇ ಗುಂಡು ಎಸೆತದಲ್ಲಿ ಮಿಥುನ್ ಜಾಧವ ಪ್ರಥಮ, 400 ಮೀಟರ್ ಓಟದಲ್ಲಿ ಭಲಭೀಮ ಹುಡೇದರ ಪ್ರಥಮ, 600 ಮೀಟರ್ ಓಟದಲ್ಲಿ ರಿಯಾಜ ಸಾಸನೂರ ತೃತೀಯ, ಚಕ್ರ ಎಸೆತದಲ್ಲಿ ಪ್ರಜ್ವಲ್ ರಾಠೋಡ ದ್ವಿತೀಯ, ಥ್ರೋ ಬಾಲ(ಗುಂಪು)ಆಟದಲ್ಲಿ ವಿಧ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿಧ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ, ಕಾರ್ಯದರ್ಶಿ ಸಂತೋಷ ಪಾಟೀಲ, ಮುಖ್ಯಗುರುಗಳಾದ ಜೆ.ಎಂ.ಕೊಣ್ಣೂರ, ದೈಹಿಕ ಶಿಕ್ಷಕರಾದ ಎಸ್.ಎಸ್.ಪಾಟೀಲ, ಶಿಕ್ಷಕರಾದ ಮುತ್ತು ಬಿರಾದಾರ, ಮತ್ತು ಸಂಗಮಾರ್ಯ ವಿಧ್ಯಾ ಸಂಸ್ಥೆಯ ಬಿಪಿಎಡ್ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.