ಕ್ರೀಡಾಕೂಟದಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆ

ತಾಳಿಕೋಟೆ:ಸೆ.17: ಪಟ್ಟಣದ ಮೈಲೇಶ್ವರ ಕ್ರಾಸ್ ನಲ್ಲಿರುವ ಬ್ರಿಲಿಯಂಟ್ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳು ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

   ಇತ್ತೀಚಗೆ ತಾಲೂಕಿನ ಫೀರಾಪೂರ ಗ್ರಾಮದಲ್ಲಿ ನಡೆದ 2022-23ನೇ ಸಾಲಿನ ತಾಳಿಕೋಟೆ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಗುಂಪು ಆಟಗಳಾದ ಕಬಡ್ಡಿ ಮತ್ತು ವ್ಹಾಲಿಬಾಲ್ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ಖೋ ಖೋ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗಳ  ಸಾಧನೆಗೆ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಮತ್ತು ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.