ಕ್ರೀಡಾಕೂಟಗಳು ಸ್ನೇಹ, ಸೌಹಾರ್ದತೆಯ ಸಂಕೇತವಾಗಬೇಕು

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ24 : ತಾಲೂಕಿನ ಯಲ್ಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.
ತಹಶೀಲ್ದಾರ್ ಕೆ ಆನಂದ್ ಶೀಲ್ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನು ಮತ್ತು ಆರೋಗ್ಯ ವೃದ್ಧಿಗಾಗಿ ಭಾಗವಹಿಸಬೇಕು ಕ್ರೀಡಾಕೂಟಗಳು ಕೇವಲ ಸೋಲು ಗೆಲುವಿನ ಮೂಲವಾಗದೆ ಪರಸ್ಪರ ಸ್ನೇಹ ಸೌಹಾರ್ದತೆಯ ಸಂಕೇತವಾಗಬೇಕು ಎಂದರು.
ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಎಂ. ಮುಂದಿನಮನಿ, ಶಂಕ್ರಪ್ಪ ಕಡ ದೊಡ್ಡೋರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ ತೋಟದ ಉಪಾಧ್ಯಕ್ಷರಾದ ಲಕ್ಷ್ಮಿ ಅಂಗಡಿ ಸದಸ್ಯರುಗಳಾದ ನೀಲವ್ವಾ ಕಟಗಿ ನಾನಪ್ಪ ಲಮಾಣಿ ಶಂಕ್ರಪ್ಪ ಕಡೆಮನಿ ಮಂಜಪ್ಪ ಅಂಗಡಿ ಮಹೇಶ್ ಗೌಡ ಭರಮಗೌಡ್ರ ಬಿ ಎನ್ ಗಾಯಕ್ವಾಡ ಈಶ್ವರ್ ಮೆಡ್ಲೇರಿ ಎಂಐ ಕಣಕೆ ದೇವೇಂದ್ರಪ್ಪ ಅಂಗಡಿ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಕೆ ಆನಂದ ಶೀಲ್ ಮತ್ತು ಬಿ ಇ ಓ ಮುಂದಿನ ಮನಿ ಅವರನ್ನು ಸನ್ಮಾನಿಸಲಾಯಿತು.