ಕ್ರೀಡಾಕೂಟಗಳು ಪ್ರತಿಭೆಗೆ ಸೂಕ್ತ ವೇದಿಕೆ: ವೈ.ಸಂಪಂಗಿ

ಕೋಲಾರ,ಏ.೨೧: ಬೇತಮಂಗಲದ ಎನ್.ಜಿ.ಹುಲ್ಕೂರು ಗ್ರಾಪಂ ವ್ಯಾಪ್ತಿಯ ಮಲ್ಲಹಳ್ಳಿ ಗ್ರಾಮದ ಶ್ರೀ ವೇಣುಗೋಪಾಲ ಸ್ವಾಮಿ ಯುವಕರ ಸಂಘದಿಂದ ಹುತಾತ್ಮ ವೀರ ಯೋಧರ ಜ್ಞಾಪಕಾರ್ಥವಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಅಯೋಜಿಸಿದ್ದ, ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ವಿಜೇತ ತಂಡಗಳಿಗೆ ಕೆಜಿಏಫ್ ಕ್ಷೇತ್ರದ ಮಾಜಿ ಶಾಸಕ ವೈ.ಸಂಪಂಗಿ ಬಹುಮಾನಗಳನ್ನು ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು. ಹಳ್ಳಿ ಭಾಗದ ಯುವಕರ ಪ್ರತಿಭೆಯನ್ನು ಪ್ರದರ್ಶಿಸಿಕೊಳ್ಳಲು ಟೂರ್ನಮೆಂಟ್‌ಗಳು ಉತ್ತಮ ವೇದಿಕೆಯಾಗಲಿದೆ, ಕ್ರೀಡಾಪಟುಗಳು ಟೂರ್ನಮೆಂಟ್ ಗಳಲ್ಲಿ ಸಕ್ರಿಯವಾಗಿ ತೋಡಗಿಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ನಿರೂಪಿಸಿ ಪ್ರಶಸ್ತಿಯನ್ನು ಪಡೆದು ಇತರರಿಗೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.
ಕೆಜಿಏಫ್ ತಾಲ್ಲೂಕಿನ ಯುವಕರು ರಾಜ್ಯ, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿರುವ ಉದಾಹರಣೆ ಇವೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವಂತಹ ಯುವಕರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಈ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್‌ನಲ್ಲಿ ಪ್ರಥಮ ಬಹುಮಾನವನ್ನು ಶ್ರೀನಿವಾಸಪುರ ತಂಡದ ಯುವಕರು ೨೫ ಸಾವಿರ ನಗದು ಹಾಗೂ ಆಕರ್ಶಕ ಟ್ರೋಪಿ, ಎರಡನೇ ಬಹುಮಾನ ಮಲ್ಲಹಳ್ಳಿ ಗ್ರಾಮದ ಯುವಕರು ೨೦ ಸಾವಿರ ನಗದು ಹಾಗೂ ಆಕರ್ಶಕ ಟ್ರೋಪಿ, ತೃತೀಯ ಬಹುಮಾನ ಮುಸ್ಟೂರು ಗ್ರಾಮದ ಯುವಕರು ೧೦ ಸಾವಿರ ನಗದು ಹಾಗೂ ಆಕರ್ಶಕ ಟ್ರೋಪಿ, ನಾಲ್ಕನೇ ಬಹುಮಾನ ೫ ಸಾವಿರ ನಗದು ಹಾಗೂ ಆಕರ್ಶಕ ಟ್ರೋಪಿಯನ್ನು ವಶಕ್ಕೆ ಪಡೆದುಕೊಂಡಿವೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧರಣಿ, ಎನ್.ಜಿ.ಹುಲ್ಕೂರು ಗ್ರಾಪಂ ಅಧ್ಯಕ್ಷ ಸುನಿಲ್ ಕುಮಾರ್, ಮಾಜಿ ಗ್ರಾಪಂ ಅಧ್ಯಕ್ಷರಾದ ಮುರಳಿ ಮೋಹನ್, ಮುನಿಯಪ್ಪ, ಗ್ರಾಪಂ ಸದಸ್ಯರಾದ ಶಂಕರಪ್ಪ, ಮಲ್ಲಹಳ್ಳಿ ಹರೀಶ್, ಜೆಸಿಬಿ ಮುನಿಯಪ್ಪ, ಪ್ರಸಾದ್, ಮಂಜುನಾಥ್, ನಾರಾಯಣಸ್ವಾಮಿ, ಮುಖಂಡರಾದ ಹಂಗಳ ರಮೇಶ್, ಅಪ್ಪಾಜಿ ಗೌಡ, ಲೋಕನಾಥ್, ಅಂಬರೀಶ್, ಮುನಿರೆಡ್ಡಿ ಸೇರಿದಂತೆ ಮಲ್ಲಹಳ್ಳಿ ಗ್ರಾಮಸ್ಥರು ಮತ್ತು ಕ್ರಿಕೆಟ್ ತಂಡಗಳ ಆಟಗಾರರು ಹಾಜರಿದ್ದರು.