ಕ್ರೀಡಾಂಗಣದಲ್ಲಿ ಯೋಗತನ ಯುವಕರಲ್ಲಿ ಆರೋಗ್ಯದ ಗುಟ್ಟು- ಮಹಿಬೂಬ ಜಿಲಾನಿ

ರಾಯಚೂರು.ಜು.೧೮- ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಯಚೂರು ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್, ನೆಹರೂ ಯುವ ಕೇಂದ್ರ, ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕರ್ನಾಟಕ ಸರಕಾರದ ಯೋಗತಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಮಹಿಬೂಬ ಜಿಲಾನಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಯೋಗತಾನ ಕಾರ್ಯಕ್ರಮದಲ್ಲಿ ಯುವಕರ ಆರೋಗ್ಯದ ಗುಟ್ಟು ಅಡಗಿದೆ.
ಯುವಕರಲ್ಲಿ ಹೊಸ ಚೈತನ್ಯ ತುಂಬಲು ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಕ್ರಮ ತುಂಬಾ ಪ್ರಯೋಜನಕಾರಿ ಆಗಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಹಲವಾರು ಮಾರಾನಂತಿಕ ರೋಗಗಳು ಹೆಚ್ಚಾಗುತ್ತಿವೆ, ಇಂತಹ ಕಾಯಿಲೆಗಳನ್ನು ಹರಡುವ ಮುನ್ನವೇ ತಡೆಯಲು ಸರ್ಕಾರವು ಯೋಗತಾನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿ ಇದರ ಜೊತೆಗೆ ವಾಲಿಬಾಲ್ನಂತಹ ಕ್ರೀಡೆಗಳನ್ನು ರೂಢಿಸಿಕೊಂಡು ಜೀವನದಲ್ಲಿ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪರೀಕ್ಷಾರಥ ತಹಶೀಲ್ದಾರ್ ಡಾ.ದತ್ತಾತ್ರೇಯ ಉಪಸ್ಥಿತರಿದ್ದರು. ಜಿಲ್ಲಾ ಯೋಗ ಸಂಯೋಜಕರು ಹಾಗೂ ರಾಯಚೂರು ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ತಿಮ್ಮಪ್ಪ ಎನ್. ವಡೆಪಲ್ಲಿ ಕಾಮನ್ ಯೋಗ ಪ್ರೋಟೋಕಾಲ್ ಅಭ್ಯಾಸ ಮಾಡಿಸಿ ಯೋಗಾಸನ ಮತ್ತು ಪ್ರಾಣಾಯಾಮ ಕುರಿತು ಉಪನ್ಯಾಸ ನೀಡಿದರು.ಈ ಕಾರ್ಯಕ್ರಮದಲ್ಲಿ ನಾಗರೀಕ ಗುತ್ತಿಗೆದಾರರು ಸುಖಮುನಿ ಯೋಗದ ಕುರಿತು ಮಾತನಾಡಿದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗ ಸಂತೋಷ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನಗರದ ಸಾರ್ವಜನಿಕರು ಹಾಗೂ ಕೆ. ಈ. ಬಿ. ಶಾಲೆಯ, ಬಾಲಕಿಯರ ಶಾಲೆಯ, ನವ ಚೇತನ ಶಾಲೆಯ, ಮತ್ತು ಟ್ಯಾಗೋರ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೆಈಬಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬವರಾಜ್ ಅಲ್ ಕೋಡ್ ಸ್ವಾಗತಿಸಿದರು. ಬಾಲಕಿಯರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರಾಧಿಕಾ ವಂದಿಸಿದರು.