ಕ್ರೀಂ ಚಿತ್ರದ ಪ್ರಚಾರ

ಕೆ.ಆರ್.ಪುರ,ಫೆ. ೧೯- ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ನಟಿ ಸಂಯುಕ್ತ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕ್ರೀಂ ಸಿನಿಮಾದ ಪ್ರಚಾರವನ್ನು ಕೆ.ಆರ್.ಪುರದ ಕೇಂಬ್ರಿಡ್ಜ್ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ನಡೆಸಿದರು.

ನಟಿ ಸಂಯುಕ್ತ ಹೆಗ್ಡೆ ಅವರು ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡುವ ಮೂಲಕ ತಮ್ಮ ಸಿನಿಮಾ ವಿಕ್ಷಣೆ ಮಾಡುವಂತೆ ಮನವಿ ಮಾಡಿದರು.

ಕ್ರೀಂ ಸಿನಿಮಾಗೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದು,
ಮೊದಲ ಟ್ರೈಲರ್ ರಿಲೀಸ್ ಆಗಿದ್ದು, ದೇವಸಂದ್ರದ ಡಿ.ಕೆ.ದೆವೇಂದ್ರ ರವರು ನಿರ್ಮಿಸಿರುವ ಈ ಚಿತ್ರಕ್ಕೆ ಅಭಿಷೇಕ್ ಬಸಂತ್ ಅಕ್ಷನ್ ಕಟ್ ಹೇಳಿದ್ದು, ಈ ಚಿತ್ರವು ಮಹಿಳಾ ಪ್ರಧಾನ ಚಿತ್ರವಾಗಿದ್ದು ಸಂಪತ್ತು ಹಾಗೂ ಮೂಢನಂಬಿಕೆ ಗಳಿಗೆ ಮಹಿಳೆಯರನ್ನು ಬಲಿ ಕೊಡುವದರ ಬಗ್ಗೆ ಈ ಸಿನಿಮಾ ಮೂಡಿಬಂದಿದೆ. ಆಗ್ನೀ ಶ್ರೀಧರ್ ರವರು ಕಥೆ ಬರೆದಿರುವದರಿಂದ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಇಂದು ಕ್ರೀಂ ಸಿನಿಮಾದ ಪ್ರಮೋಷನ್ ಗಾಗಿ ನಟಿ ಸಂಯುಕ್ತ ಹೆಗ್ಡೆ ಕೆಆರ್ ಪುರದ ವಿವಿಧ ಕಾಲೇಜುಗಳಲ್ಲಿ ಪ್ರಚಾರ ಮಾಡಿದರು.ಈ ಸಂದರ್ಭದಲ್ಲಿ ನಿರ್ಮಾಪಕ ಡಿ.ಕೆ.ದೇವೆಂದ್ರ,ಸೈಯದ್ ಸಮಿವುಲ್ಲಾ ಖಾದ್ರಿ ಇದ್ದರು.

ಸುದ್ದಿಚಿತ್ರ:ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ನಟಿ ಸಂಯುಕ್ತ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕ್ರೀಂ ಸಿನಿಮಾದ ಪ್ರಚಾರವನ್ನು ಕೆ.ಆರ್.ಪುರದ ಕೇಂಬ್ರಿಡ್ಜ್ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ನಡೆಸಿದರು.