ಕ್ರಿಸ್ ಮಸ್ ಸಡಗರ-ಸಂಭ್ರಮ


ಮಾನ್ವಿ.ಡಿ.೨೪- ಅಶೋಕ್ ಕುಂಬ್ದಾಳ್ ಅವರ ಮನೆಯಲ್ಲಿ ಅದ್ದೂರಿಯಾಗಿ ಕ್ರಿಸ್ ಮಸ್ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಪಟ್ಟಣದ ಕೋನಾಪುರ ಪೇಟೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಪ್ರತಿಯೊಬ್ಬರ ಮನೆಯಲ್ಲಿ ಅದ್ದೂರಿಯಾಗಿ ಕ್ರಿಸ್ ಮಸ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.
ಕ್ರೈಸ್ತ ಧರ್ಮದ ಭಕ್ತರ ಮನೆಗಳಲ್ಲಿ ಯೇಸು ಹುಟ್ಟಿದ ಸಂಭ್ರಮವನ್ನು ಒಂದು ವಾರದ ಹಿಂದಿನಿಂದ ಕ್ರಿಸ್ತ ಕುಟುಂಬದ ಮನೆಗಳಲ್ಲಿ ಗೋದಲಿ ಸೃಷ್ಟಿಸಿ ಆ ಗೋದಲಿಯ ಸುತ್ತ ಸಣ್ಣ ಸಣ್ಣ ಲೈಟ್ ಗಳು ಮತ್ತು ಕಲರ್ ಕಲರ್ ನಕ್ಷತ್ರ ಮತ್ತು ಬಲೂನ್ ಗಳಿಂದ ಅಲಂಕರಿಸಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆಯಲ್ಲಿ ತೊಡಗಿದ್ದಾರೆ.
ಕೋನಾಪುರ ಪೇಟೆಯ ಕೇಂದ್ರಬಿಂದುವಾಗಿರುವ ಸೇಂಟ್ ಮೇರಿಸ್ ಚರ್ಚಿನ ಒಳಗಡೆ ಮತ್ತು ಹೊರಗಡೆ ಕಲರ್ ಕಲರ್ ದೀಪಗಳಿಂದ ಅಲಂಕಾರ ಮಾಡಿರುವುದು ಯೇಸುವಿನ ಜನನವನ್ನು ಸಾರುವ ಸಂದೇಶಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.