ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನಿರ್ಗತಿಕರಿಗೆ ಚಾದರ್ ವಿತರಣೆ

ಸಿರವಾರ.ಡಿ.೨೭- ಸಿರವಾರ ಪಟ್ಟಣದ ಅಂಜುಮನ್ ಕಮಿಟಿ ವತಿಯಿಂದ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ವಿವಿಧೆಡೆ ಇರುವ ಬುದ್ಧಿಮಾಂದ್ಯ ನಿರ್ಗತಿಕರಿಗೆ ಚಾದರ್(ಕಂಬಳಿ) ವಿತರಣೆ ಮಾಡಲಾಯಿತು.
ನಂತರ ಮಾತನಾಡಿದ ಅಂಜುಮನ್ ಕಮೀಟಿ ಅಧ್ಯಕ್ಷರಾದ ಎಂ.ಡಿ ವಲಿಸಾಬ್ ಗುತ್ತೇದಾರ ಅವರು ನಮ್ಮ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಚಳಿ ಹೆಚ್ಚಾಗಿದ್ದು ನಾವುಗಳು ಮನೆಯಲ್ಲಿ ಮಲಗಲು ಆಗುತ್ತಿಲ್ಲ ಅಂತಹ ಬುದ್ಧಿಮಾಂದ್ಯ ನಿರ್ಗತಿಕರು ಹೇಗೆ ಇರುತ್ತಾರೆ ಎಂದು ತಿಳಿದು ನಮ್ಮ ಅಂಜುಮನ್ ಕಮಿಟಿಯ ಸದಸ್ಯರು ಕೂಡಿಕೊಂಡು ಕ್ರೈಸ್ತ ಸಮಾಜದ ಭಾಂಧವರ ಪವಿತ್ರ ಹಬ್ಬವಾದ ಕ್ರಿಸ್‌ಮಸ್ ಹಬ್ಬದಂದು ನೀಡಿದರಾಯಿತು ಎಂದು ಇಂದು ನೀಡಲಾಯಿತು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮೊಹಮ್ಮದ್ ಇಬ್ರಹಿಂ(ಎಲ್.ಐ.ಸಿ), ಸತ್ತಾರ್ ಸಾಬ್ ಗುತ್ತೇದಾರ, ಕಾಂಗ್ರೇಸ್ ಯುವ ಮುಖಂಡ ಹಾಜಿ ಚೌದ್ರಿ, ಜಮೀರ್, ಪ.ಪಂ ಸದಸ್ಯ ಸಂದೀಪ್ ಪಾಟೀಲ್, ರಾಜ ಮೊಹಮ್ಮದ್, ಅಜೀಮುದ್ಧೀನ್ ಸಾಬ್, ಇಸ್ಮಾಯಿಲ್ ಮುಜೀದ್ ಸೇರಿದಂತೆ ಸದಸ್ಯರು ಇದ್ದರು.