ಕ್ರಿಸ್ಮಸ್ ಶಾಂತಿ, ಪ್ರೀತಿ, ನೆಮ್ಮದಿಯ ಪ್ರತೀಕ

ಔರಾದ :ಡಿ.24: ನಜರೇತಿನ ಯೇಸು ಎಂದೇ ಖ್ಯಾತನಾಮರಾದ ಜೀಸಸ್ ಅವರು ಜೋಸೇಫ್ ಮೇರಿ ದಂಪತಿಗಳ ಗರ್ಭದಲ್ಲಿ ಜನಿಸಿದರು. ಮೇರಿಯೂ ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತರು ಗರ್ಭಧರಿಸಿ ಪರಿಶುಧ್ಧ ಜೀವನ ನಡೆಸುತ್ತಾಳೆ. ಯಾವುದೇ ದೇಹ ಸಂಪರ್ಕವಿಲ್ಲದೇ ದೇವರ ಅನುಗ್ರಹದಿಂದ ಮೇರಿಗೆ ನವಮಾಸಗಳು ತುಂಬಿದಾಗ ಬೆತ್ಲೆಹೇಮ್ ದ ಕುರಿದೊಡ್ಡಿಯಲ್ಲಿ ಪುಟ್ಟ ಯೇಸುವಿನ ಜನವಾಗುತ್ತದೆ. ಯೇಸು ಜನಿಸಿದಾಗ ಆಕಾಶದಲ್ಲಿ ಒಂದೊ ದೊಡ್ಡ ನಕ್ಷತ್ರ ಕಾಣಿಸಿಕೊಂಡಿತ್ತು. ಇವತ್ತಿಗೂ ಮುಂಜಾನೆ , ಸಾಯಂಕಾಲ ಆಕಾಶದಲ್ಲಿ ಚುಕ್ಕೆಗಳು ಕಾಣಿಸುತ್ತವೆ ಎಂದು ಫಾದರ್ ಮಗಿಮೈಂದಸ್ ಹೇಳಿದರು.

ಶನಿವಾರ ತಾಲೂಕಿನ ಉಜನಿ ಪ್ರೇಮಾಂಜಲಿ ಪ್ರೌಢಶಾಲೆಯಲ್ಲಿ ಕ್ರೀಸ್ ಮಸ್ ಹಬ್ಬ ಜ್ಯೋತಿ ಪ್ರಜ್ವಲಿಸಿ ಕೇಕ್ ಕತ್ತಿರಿ ಎಲ್ಲರಿಗೂ ಸಿಹಿ ತಿನ್ನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಸ್ ಮಸ್ ಅಂದರೇ ಶಾಂತಿ, ಪ್ರೀತಿ, ಉದಾರ ಮನಸ್ಸು, ನೆಮ್ಮದಿ ನೀಡುವುದರ ಪ್ರತೀಕವಾಗಿದೆ. ಎಲ್ಲರು ಯೇಸುವಿನ ತತ್ವಗಳನ್ನು , ವಚನಗಳನ್ನು ಓದಬೇಕು ಹಾಗು ಮಹಾನ್ ಸಂತನ ವಾಣಿಗಳನ್ನು ಆಲಿಸಿ ದಿನಾಲು ಪ್ರಾರ್ಥಿಸಬೇಕು ಎಂದರು.

ಮುಖ್ಯೋಪಾಧ್ಯಯಿನಿ ಸಿಸ್ಟರ್ ಪ್ರಶಾಂತಿ ಮೋನಿಸ್ ಅವರು ಮಾತನಾಡಿ, ಯೇಶು ಕ್ರಿಸ್ತರು ಜನರ ಮೌಢ್ಯ, ಶೋಷಣೆ, ಕಂದಾಚಾರಗಳು, ಹಾಗು ಮಾನವತೆಯಿಲ್ಲದ ವಿರುದ್ಧ ಹೋರಾಡಿದರು. ಕ್ಷಮೇ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರು ಒಂದೇ ಎಂಬ ಉದಾತ್ತವಾದ ಭಾವನೆ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನು ದೈವಸ್ವರೂಪಿಯಾಗುತ್ತಾನೆ ಎಂದರು.

ಕಾರ್ಯಕ್ರಮದ ನಿಮಿತ್ಯ ಶಾಲಾ ಮಕ್ಕಳಿಂದ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬದ ನಿಮಿತ್ಯ ಶಾಲೆಯಲ್ಲಿ ಆಯೋಜಿಸಿದ ಹತ್ತು ಹಲವಾರು ಸ್ಪರ್ಧೆಗಳ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸುಧಾಕರ್ ಕೊಳ್ಳುರ್, ಗಫರ್‍ಖಾನ್ , ರವೀಂದ್ರರೆಡ್ಡಿ, ಸಂಜು, ಸಂಗೀತಾ, ಸಿ. ಅರ್ಜಿತಾ, ಸಿ.ಸೇರೋಳಿನ್, ಸಿದ್ದಪ್ಪ, ಸಂಗೀತಾ, ಗಣಪತಿ, ಸರೋಜಾ, ರಸೀದ್, ವೆಂಕಟರಾವ್ ಪಾಟೀಲ್, ಆಷ್ಮಾ ಸೇರಿದಂತೆ ಇತರರಿದ್ದರು.