ಕ್ರಿಸ್‍ಮಸ್ ಉತ್ಸವ: ಮಾರ್ಟಿನ್ ಲೂಥರ್ ಪ್ರಶಸ್ತಿ ಪ್ರದಾನ

ಕಲಬುರಗಿ:ಡಿ.21:ನಗರದ ಬ್ಯಾಂಕ್ ಕಾಲೋನಿಯ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದ ಬಳಿ ಇರುವ ಶಾಲೋಮ್ ಎವರಲಾಸ್ಟಿಂಗ್ ಲೈಫ್ ಚರ್ಚ ವತಿಯಿಂದ ಕ್ರಿಸ್‍ಮಸ್ ಹಬ್ಬವನ್ನು ಡಿಸೆಂಬರ್ 22ರಂದು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಚರ್ಚ್ ಸಂಸ್ಥಾಪಕ ಮತ್ತು ಅಧ್ಯಕ್ಷ ಬಿಶಪ್ ಗೋಪಾಲ್ ಶಾಲಮ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸಂದೇಶ ಕೊಡಲು ಮಂಗಳೂರಿನಿಂದ ರೋಹನ್ ಜಥನ್ ಅವರು ಆಗಮಿಸುವರು. ಉದ್ಘಾಟನೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ನೆರವೇರಿಸುವರು. ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಕೇಕ್ ಕತ್ತರಿಸುವರು. ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಮತ್ತು ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಕ್ಯಾಲೆಂಡರ್ ಉದ್ಘಾಟಿಸುವರು ಎಂದರು.
ಕಾರ್ಯಕ್ರಮವು ಸಂಜೆ 5 ಗಂಟೆಗೆ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಮಹಾಪೌರ ವಿಶಾಲ್ ದರ್ಗಿ, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಅತಿಥಿಗಳಾಗಿ ತಹಸಿಲ್ದಾರ್ ಕು. ನಾಗಮ್ಮಾ ಕಟ್ಟಿಮನಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಮಹಾನಗರ ಪಾಲಿಕೆ ಸದಸ್ಯ ವಿಶಾಲ್ ನವರಂಗ್, ಕಾಂಗ್ರೆಸ್ ಮುಖಂಡ ಶಾಮ್ ನಾಟೀಕಾರ್, ಲಿಂಗರಾಜ್ ತಾರಫೈಲ್, ಸಚಿನ್ ಫರತಾಬಾದ್, ಲಕ್ಷ್ಮಣ್ ಮೂಲಭಾರತಿ ಅವರು ಆಗಮಿಸುವರು. ಈ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ನೃತ್ಯ ಮತ್ತು ರೋಗಿಗಳ ಕಲ್ಯಾಣಕ್ಕಾಗಿ ಪ್ರಾರ್ಥನ ಮಾಡಲಾಗುವುದು. ಹೊಸ ವರ್ಷದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲೆಂದು ಪ್ರಾರ್ಥಿಸಲಾಗುವುದು. ಉತ್ಸವದಲ್ಲಿ ಅನೇಕ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಸಹ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.
ಮಾರ್ಟಿನ್ ಲೂಥರ್ ಪ್ರಶಸ್ತಿಯನ್ನು ಡಿವೈಎಸ್‍ಪಿ ಶರಣಬಸಪ್ಪ ಭಜಂತ್ರಿ, ಡಾ. ಸಚಿನ್ ಆರ್. ಜೀವಣಗಿ, ಉಪನ್ಯಾಸಕ ಡಾ. ಪೀಟರ್ ವಿನೋದ್ ಚಂದ್, ಇಂಜಿನಿಯರ್ ಸುನೀಲಕುಮಾರ್ ಬಿ. ಅಣದೂರ್, ಸಮಾಜ ಸೇವಕ ರಾಜಣ್ಣ ಆರ್. ಕರದಾಳ್, ವಾರ್ತಾ ಮತ್ತು ಭೋಧನೆ ಕ್ಷೇತ್ರದ ವೆಂಕಟೇಶ್, ಶಿಕ್ಷಣ ಕ್ಷೇತ್ರದಲ್ಲಿ ಗುರುರಾಜ್ ಸಿ. ಸಾವಳಗಿ, ಆರೋಗ್ಯ ಕ್ಷೇತ್ರದಲ್ಲಿ ಕಮಲಾ ಗಂಡ ಕ್ರಿಸ್ಟೋಪರ್ ಸರಡಗಿ, 108 ಅಂಬುಲೆನ್ಸ್ ಕ್ಷೇತ್ರದಲ್ಲಿ ಜಗದೀಶ್ ಪೀರಪ್ಪ ಕುಕ್ಕುಂದಿ, ಪತ್ರಿಕಾ ಜಾಲತಾಣದಲ್ಲಿ ಗಂಗಾಧರ್ ಹಿರೇಮಠ್, ಸಂಗೀತ ಕ್ಷೇತ್ರದಲ್ಲಿ ರುಕ್ಮಿಣಿ ಬಸನೂರ್, ನ್ಯಾಯಾಂಗ ಕ್ಷೇತ್ರದಲ್ಲಿ ಸಂಜೀವಕುಮಾರ್ ಜೋಗ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದರು.