ಕ್ರಿಸ್ತರಾಜ ಪಿಯು ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ

ಸಂಜೆವಾಣಿ ವಾರ್ತೆ
ಹನೂರು ಏ 15 :- ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆಯ ವ್ಯವಸ್ಥಾಪಕ ಫಾ.ರೋಷನ್ ಬಾಬು ರವರು ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಂಸ್ಥೆಯ ಆಸ್ತಿ. ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಉಪನ್ಯಾಸಕರ ಪರಿಶ್ರಮವಿದೆ. ಈ ವಿದ್ಯಾ ಸಂಸ್ಥೆಯಲ್ಲಿ ಕಲಿತ ಜ್ಞಾನ ಮೌಲ್ಯವನ್ನು ಜೀವನದ ಕೊನೆಯವರೆಗೂ ಅಳವಡಿಸಿ ಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳ ಬೇಕು ಎಂದು ಶುಭ ಹಾರೈಸಿದರು.
ಪರೀಕ್ಷೆಯಲ್ಲಿ ಕ್ರಿಸ್ತರಾಜ ಪಿ.ಯು.ಕಾಲೇಜಿಗೆ ಶೇಕಡಾ 97.18 % ರಷ್ಠು ಫಲಿತಾಂಶ ಬಂದಿದೆ.ವಾಣಿಜ್ಯ ವಿಭಾಗದಲ್ಲಿ ಶಶಾಂಕ್ 600 ಕ್ಕೆ 584 ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ.
ವಿಜ್ಞಾನ ವಿಭಾಗದಲ್ಲಿ ಅನು.ಸಿ 600 ಕ್ಕೆ 564 ಅಂಕಗಳನ್ನು ಪಡೆದು ತಾಲ್ಲೂಕಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇನ್ನುಳಿದಂತೆ ವೀರೇಶ್ 574 ಅಂಕಗಳು, ದಿವ್ಯ 570 ಅಂಕಗಳು, ಲಿಖಿತ 558 ಅಂಕಗಳು, ಮಹೇಶ್ವರಿ ಮತ್ತು ಜೀವಿತ 552ಅಂಕಗಳನ್ನು ಪಡೆದಿದ್ದಾರೆ. ಒಟ್ಟಾರೆ 142 ವಿದ್ಯಾರ್ಥಿಗಳಲ್ಲಿ 52 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ಹಾಗೂ 79 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಉಪನ್ಯಾಸಕರಾದ ವಿನೋದ್, ಸ್ಟೀಫನ್ , ವಿನಿಲ್, ಜೈನ್ ಮುತ್ತು, , ಪ್ರಸನ್ನ ,ಪ್ರಕಾಶ್, ಸೋಮಣ್ಣ, ಪವಿತ್ರ, ಉಪಸ್ಥಿತರಿದ್ದರು.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ವ್ಯವಸ್ಥಾಪ ಕರಾದ ಫಾ.ರೋಷನ್ ಬಾಬು ರವರು, ಮತ್ತು ಪ್ರಾಂಶುಪಾಲ ಸಿಸ್ಟರ್ ಜಾನ್ ಶಾಂತಿ ರವರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆಗ ಳನ್ನು ಸಲ್ಲಿಸಿದ್ದಾರೆ.